ಪ್ರಬಲ ಪೈಪೋಟಿಯಲ್ಲಿ ಭಾರತ ದಾಖಲಿಸಿತು ಜಯಭೇರಿ : 55 ವರ್ಷದ ಬಳಿಕ ಎಎಫ್‌ಸಿ ಏಷ್ಯಾಕಪ್‌

ಭಾರತದ ಫುಟ್ ಬಾಲ್ ತಂಡ ಎಎಫ್ ಸಿ ಏಷ್ಯಾಕಪ್ ನಲ್ಲಿ ಐವತ್ತೈದು ವರ್ಷಗಳ ಬಳಿಕ ಗೆಲವು ಸಾಧಿಸಿದೆ. ಇದರಿಂದ  ಎಎಫ್‌ಸಿ ಏಷ್ಯಾಕಪ್‌ನಲ್ಲಿ ಚೊಚ್ಚಲ ಕಿರೀಟದ ಮೇಲೆ ಕಣ್ಣಿಟ್ಟಿರುವ ಭಾರತ ಫುಟ್‌ಬಾಲ್‌ ತಂಡಕ್ಕೆ ಮುಂದಿನ  ಹಾದಿ ಸುಗಮವಾದಂತಾಗಿದೆ.

ಅಲ್‌ ನಹಯಾನ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ಎ’‍ ಗುಂಪಿನ ಹಣಾಹಣಿಯಲ್ಲಿ ಭಾರತ 4–1 ಗೋಲುಗಳಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿದೆ. ಇದರೊಂದಿಗೆ ಮೂರು ಪಾಯಿಂಟ್ಸ್‌ ಕಲೆಹಾಕಿ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.

ಯೋಜನೆಯೊಂದಿಗೆ ಅಂಗಳಕ್ಕಿಳಿದಿದ್ದ ಭಾರತ ತಂಡ ಶುರುವಿನಲ್ಲಿ ಎದುರಾಳಿಗಳಿಂದ ಪ್ರಬಲ ಪೈಪೋಟಿ ಎದುರಿಸಿತು. ಭಾರತದ ಪರ ಕ್ಯಾಪ್ಟನ್ ಸುನಿಲ್  ಚೆಟ್ರಿ ಎರಡು ಗೋಲುಗಳನ್ನು ಹಾಗೂ ಮಿಡ್‌ಫೀಲ್ಡರ್‌ ಅನಿರುದ್ಧ್‌ ಥಾಪಾ ಮತ್ತು ಜೆಜೆ ಲಾಲ್‌ಪೆಕ್ಲುವಾ ತಲಾ ಒಂದು ಗೋಲುಗಳಿಸಿ ಭಾರತದ ವಿಜಯಕ್ಕೆ ಕಾರಣರಾದರು.

ಕ್ಯಾಪ್ಟನ್ ಸುನಿಲ್ ಚೆಟ್ರಿ ಈ ಪಂದ್ಯದಲ್ಲಿ ಗಳಿಸಿದ ಎರಡು ಗೋಲುಗಳು ಸೇರಿ ಈತನಕ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಖಾತೆಗೆ ಒಟ್ಟು 66 ಗೋಲುಗಳು ಜಮಾಗೊಂಡಂತಾಯಿತು. ಮುಂದಿನ ಪಂದ್ಯದಲ್ಲಿ ಯುಎಇ ವಿರುದ್ಧ ಭಾರತ ತಂಡದ ಆಟಗಾರರು ಸೆಣೆಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com