ಟ್ವಿಟರ್ ನಲ್ಲಿ ಫ್ಯಾಮಿಲಿ ಫೋಟೊ ಹಂಚಿಕೊಂಡ ಹಿಟ್‍ಮ್ಯಾನ್ – ರೋಹಿತ್ ಮಗಳ ಹೆಸರೇನು ಗೊತ್ತೇ..?

ಟೀಮ್ ಇಂಡಿಯಾ ಕ್ರಿಕೆಟರ್ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜದೇಹ್ ಡಿಸೆಂಬರ್ 30ರಂದು ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಡುವೆಯೇ ಪತ್ನಿ ಹಾಗೂ ಮಗಳನ್ನು ಕಾಣಲು ಮುಂಬೈಗೆ ಬಂದಿಳಿದಿದ್ದರು.

ಇದೀಗ ರೋಹಿತ್ ಶರ್ಮಾ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ಪತ್ನಿ ಮತ್ತು ಮಗಳ ಜೊತೆಯಿರುವ ಮುದ್ದಾದ ಫ್ಯಾಮಿಲಿ ಫೋಟೊವೊಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ರೋಹಿತ್ ಶರ್ಮಾ, ತಮ್ಮ ಮಗಳ ಹೆಸರು ‘ಸಮೈರಾ’ ಎಂದು ತಿಳಿಸಿದ್ದಾರೆ.

ಜನೆವರಿ 12ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಏಕದಿನ ಸರಣಿ ಆರಂಭಗೊಳ್ಳಲಿದ್ದು, ಜನೆವರಿ 8ರಂದು ರೋಹಿತ್ ಶರ್ಮಾ ಟೀಮ್ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com