ಬೆಂಗಳೂರು : ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ ಗ್ರಂಥ ಬಿಡುಗಡೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕುರುಬರ ಸಾಂಸ್ಕೃತಿಕ ಪರಿಷತ್ತು ವತಿಯಿಂದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ 13 ಗ್ರಂಥವನ್ನ ಮಾಜಿ ಸಿಎಂ ಸಿದ್ದರಾಮಯ್ಯ ರವಿವಾರ ಬಿಡುಗಡೆ ಮಾಡಿದರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಈ ಸಮಾರಂಬದಲ್ಲಿ ಹೊಸದುರ್ಗದ ಕನಕಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳ ಉಪಸ್ಥಿತರಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ 13 ಗ್ರಂಥವನ್ನು ಲೋಕಾರ್ಪಣೆ ಮಾಡಿದರು.

ಕುರುಬ ಸಮುದಾಯದ ಸಾಂಸ್ಕೃತಿಕ ಇತಿಹಾಸವನ್ನು 15 ಸಂಪುಟಗಳಲ್ಲಿ ಹೊರತರುತ್ತಿರಲಾಗುತ್ತಿದ್ದು, ಸಮುದಾಯವೊಂದರ ಸಮಗ್ರ ಮಾಹಿತಿಯನ್ನು ದಾಖಲಿಸಿರುವ ಮಹತ್ವಾಕಾಂಕ್ಷೆಯ ದೂರಗಾಮಿ ಇತಿಹಾಸದ ಯೋಜನೆಯಾಗಿದೆ. ಸಮುದಾಯವೊಂದರ ಸಮಗ್ರವಾದ ಕಲೆ-ಸಂಸ್ಕೃತಿ-ಸಾಂಸ್ಕೃತಿಕ ಮಾಹಿತಿಯನ್ನು ವಿಷಯವಾರು ವಿಂಗಡಿಸಿ, ವಿಸ್ತ್ರತವಾಗಿ ಪ್ರಕಟಿಸಲಾಗಿದೆ.

ಮೊದಲ ಹಂತದಲ್ಲಿ 13 ಗ್ರಂಥಗಳು ಲೋಕಾರ್ಪಣಾ ಕಾರ್ಯಕ್ರಮ ರವಿವಾರ ನೆರವೇರಿತು. ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆ ಹಾಗೂ ಸುಗಮ ಸಂಗೀತ ಕನಕ ಕಾವ್ಯ ವೈಭವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

One thought on “ಬೆಂಗಳೂರು : ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ ಗ್ರಂಥ ಬಿಡುಗಡೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

Leave a Reply

Your email address will not be published.

Social Media Auto Publish Powered By : XYZScripts.com