Cricket : ಪಾಕ್ ವಿರುದ್ಧ ದ.ಆಫ್ರಿಕಾಕ್ಕೆ 9 ವಿಕೆಟ್ ಗೆಲುವು – ಟೆಸ್ಟ್ ಸರಣಿ ಹರಿಣಗಳ ಕೈವಶ

ಕೇಪ್ ಟೌನ್ ನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡದ ವಿರುದ್ಧ ಆತಿಥೇಯ ದಕ್ಷಿಣ ಆಪ್ರಿಕಾ 9 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಫಾಫ್ ಡು ಪ್ಲೆಸಿಸ್ ನೇತೃತ್ವದ ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.

ಪಾಕಿಸ್ತಾನ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 294ಕ್ಕೆ ಆಲೌಟ್ ಆಯಿತು. ಪಾಕಿಸ್ತಾನ ದ ಪರವಾಗಿ ಅಸದ್ ಶಫೀಕ್ (88), ಬಾಬರ್ ಆಜಮ್ (72), ಶಾನ್ ಮಸೂದ್ (61) ಅರ್ಧಶತಕ ಬಾರಿಸಿದರು.

ಗೆಲ್ಲಲು 41 ರನ್ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 9.5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 43 ರನ್ ಗಳಿಸಿ ಗೆಲುವಿನ ನಗೆ ಬೀರಿತು.

 

Leave a Reply

Your email address will not be published.