Sydney Test : ಕುಲದೀಪ್ ಗೆ 5 ವಿಕೆಟ್ – ಆಸೀಸ್ 300ಕ್ಕೆ ಆಲೌಟ್ ; ಭಾರತದ ಗೆಲುವಿನ ಕನಸಿಗೆ ಮಳೆ ಅಡ್ಡಿ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟಕ್ಕೂ ಸಹ ಮಳೆ ಅಡ್ಡಿಪಡಿಸಿದೆ. ರವಿವಾರ ಕೇವಲ 25.2 ಓವರ್ ಗಳ ಆಟ ಮಾತ್ರ ನಡೆಯಿತು.

ಆಸ್ಟ್ರೇಲಿಯಾ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 300ಕ್ಕೆ ಆಲೌಟ್ ಆಯಿತು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 5, ರವೀಂದ್ರ ಜಡೇಜಾ 2, ಮೊಹಮ್ಮದ್ ಶಮಿ 2, ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತಕ್ಕಿಂತ 322 ರನ್ ಹಿನ್ನಡೆ ಎದುರಿಸುತ್ತಿದ್ದ ಆಸ್ಟ್ರೇಲಿಯಾ ಮೇಲೆ ಟೀಮ್ ಇಂಡಿಯಾ ಫಾಲೋವ್ ಆನ್ ಹೇರಿತು. ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ 4ನೇ ದಿನದಾಟ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com