ಬಿಜೆಪಿ ಯುವಮೋರ್ಚಾದ ವಿಜಯ ಲಕ್ಷ್ಯ-2019 ಯೋಜನೆ : ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟನೆ

2019ರ ಲೋಕಸಭಾ ಚುನಾವಣಾ ತಯಾರಿ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಕೈಗೊಂಡಿರುವ ‘ವಿಜಯ ಲಕ್ಷ್ಯ-2019’ ಯೋಜನೆಯಡಿ ಕಾರ್ಯ ನಿರ್ವಹಿಸಲಿರುವ ಕಾರ್ಯಕರ್ತರ ಕಾರ್ಯಾಗಾರವನ್ನು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಉದ್ಘಾಟಿಸಲಾಯಿತು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್.ರವಿಕುಮಾರ್ , ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಭಾರಿಗಳಾದ ಶ್ರೀ ಮಧು ಕೇಶವ ದೇಸಾಯಿ, ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ವೈ.ವಿಜಯೇಂದ್ರ, ಶ್ರೀ ತಮ್ಮೇಶ್ ಗೌಡ, ಶ್ರೀ ಬಸವರಾಜ ಯಂಕಚಿ ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 400 ಯುವಕರು ಕಾರ್ಯಾಗಾರದಲ್ಲಿ ಭಾಗವಹಿಸದ್ದರು.

2 thoughts on “ಬಿಜೆಪಿ ಯುವಮೋರ್ಚಾದ ವಿಜಯ ಲಕ್ಷ್ಯ-2019 ಯೋಜನೆ : ಕಾರ್ಯಕರ್ತರ ಕಾರ್ಯಾಗಾರ ಉದ್ಘಾಟನೆ

Leave a Reply

Your email address will not be published.