೮೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರ್ಗಿಯಲ್ಲಿ ನಡೆಸಲು ತೀರ್ಮಾನ – ಸಚಿವ ಪ್ರಿಯಾಂಕ್ ಖರ್ಗೆ ಹರ್ಷ

ಪ್ರಸ್ತುತ ಧಾರವಾಡದಲ್ಲಿ ನಡೆಯುತ್ತಿರುವ ೮೪ ನೇ ಕನ್ಮಡ ಸಾಹಿತ್ಯ ಸಮ್ಮೇಳನದ ಎರಡನೆಯ‌ ದಿನದಂದು ನಡೆದ ಕಾರ್ಯಕಾರಣಿ ಸಮಿತಿಯಲ್ಲಿ ೮೫ ನೇ ಸಮ್ಮೇಳನವನ್ನು ಕಲಬುರಗಿಯಲ್ಲಿ ನಡೆಸಲು ತೀರ್ಮಾಸಲಾಗಿದೆ.

೮೫ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಲಬುರಗಿಯನ್ನು ಆಯ್ಕೆ ಮಾಡಿದ್ದಕ್ಕೆ ಸಮಾಜಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಹರ್ಷ ವ್ಯಕ್ತಪಡಿಸಿ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಮನು ಬಳಿಗಾರ ಹಾಗೂ ಕಾರ್ಯಕಾರಿ ಸಮಿತಿಯ ಇತರೆ ಸದಸ್ಯರಿಗೆ ಗೌರವಪೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಚಿವರು ಕಲಬುರಗಿ ‌ಜಿಲ್ಲೆ ಕನ್ನಡನಾಡಿಗೆ ಹಿರಿಮೆ ತಂದುಕೊಟ್ಟ ಕನ್ನಡದ ಮೊಟ್ಟಮೊದಲಗ್ರಂಥ ಕವಿರಾಜಮಾರ್ಗ ರಚಿತವಾದ ಕನ್ನಡದ‌ ಸೊಗಡಿನ ನೆಲವಾಗಿದ್ದು ಕನ್ನಡದ ಹೆಮ್ಮೆಯ ಸಮ್ಮೇಳನವನ್ನು ನಡೆಸಲು ಕಲಬುರಗಿಯನ್ನು ಆಯ್ಕೆ  ಮಾಡಿಕೊಂಡಿದ್ದು ಸೂಕ್ತವೂ ಹಾಗೂ ಸಮಯೋಚಿತವಾಗಿದೆ ಎಂದು ಪತ್ರಿಕಾ‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ಸಂಸದರಾದ ಹಿರಿಯ ನಾಯಕ ಎಂ. ಮಲ್ಲಕಾರ್ಜುನ ಖರ್ಗೆ ಅವರ ಒತ್ತಾಸೆಯ ಮೇರೆಗೆ ಸ್ಪಂದಿಸಿ ಸಾಹಿತ್ಯ ಸಮ್ಮೇಳನವನ್ನು ಕಲಬುರಗಿಗೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ವೀರಭದ್ರ ಸಿಂಪಿ ಮತ್ತು ಪರಿಷತ್ ನ ಇತರೆ ಗೌರವಾನ್ವಿತ ಸದಸ್ಯರು, ಲೇಖಕರು, ಸಾಹಿತಿಗಳು, ಬರಹಗಾರರು ಹಾಗೂ  ಕನ್ಮಡಾಭಿಮಾನಿಗಳು ಈ ಸಂದರ್ಭದಲ್ಲಿ ಅಭಿನಂದನಾರ್ಹರು.

೮೫ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ನಡೆಸಲು ಕಲಬುರಗಿ ಜಿಲ್ಲೆಯ ಎಲ್ಲ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು, ಬರಹಗಾರರು ಹಾಗೂ ಸಂಘಸಂಸ್ಥೆಗಳು ಮುಕ್ತ ಮನಸಿನಿಂದ ಕೈ ಜೋಡಿಸಿ ರಾಷ್ಟ್ರಕೂಟರ ನಾಡಿನ ಕೀರ್ತಿಯನ್ನು ರಾಷ್ಟ್ರಕ್ಕೆ ಹಾಗೂ ಹೊರರಾಷ್ಟ್ರಕ್ಕೆ ತಲುಪಿಸಬೇಕೆಂದು ಅವರು ಕೋರಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com