ಚಂ’ಧನ’ವನದ ಮೇಲೆ ಐಟಿ ದಾಳಿಯ ಹಿಂದನ ಕಾರಣ ಹೇಳಿದ ಸಿದ್ದರಾಮಯ್ಯ

ಸಿನಿಮಾ ನಟ ಮತ್ತು ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಹಿಂದಿನ ಕಾರಣ ಏನು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇದನ್ನ ವಿಶ್ಲೇಷಿಸುತ್ತಿದ್ದಾರೆ.

ಸ್ಟಾರ್ ನಟರ ಮನೆ ಮೇಲೆ ನಡೆದಿರುವ ದಾಳಿ ಬಗ್ಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ ಅವರು, ”ಈ ದಾಳಿಯ ಹಿಂದೆ ದುರುದ್ದೇಶ ಇರಬಹುದೆಂಬ ಅನುಮಾನ ಮೂಡುತ್ತಿದೆ” ಎಂದಿದ್ದಾರೆ.

”ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಾಗಿದ್ದರೆ ಸಂಬಂಧಿತ ಲೆಕ್ಕಪತ್ರಗಳ ಪರಿಶೀಲನೆ ನಡೆಸುವ ಅಧಿಕಾರ ಐಟಿ ಇಲಾಖೆಗೆ ಇದೆ.‌ ಅದನ್ನು ಗೌರವಿಸೋಣ. ಆದರೆ ಮೋದಿ ಸರ್ಕಾರದಲ್ಲಿ ಐಟಿ ಇಲಾಖೆಯ ಕಾರ್ಯಶೈಲಿಯನ್ನು ಗಮನಿಸಿದರೆ ಅದು ನಡೆಸುತ್ತಿರುವ ದಾಳಿಯ ಹಿಂದೆ ದುರುದ್ದೇಶ ಇರಬಹುದೆಂಬ ಅನುಮಾನ ಮೂಡುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಮೇಲ್ನೋಟಕ್ಕೆ ಇದು ಬಿಗ್ ಬಜೆಟ್ ಸಿನಿಮಾಗಳ ಕಾರಣದಿಂದ ಆಗಿರುವ ದಾಳಿ ಎನ್ನಲಾಗುತ್ತಿದೆ. ಮತ್ತೊಂದೆಡೆ ನಟ ಮತ್ತು ನಿರ್ಮಾಪಕರು ತೆರಿಗೆ ಮತ್ತು ಆದಾಯದ ಬಗ್ಗೆ ಅನುಮಾನ ಬಂದಿರುವ ಕಾರಣ ಮಾಡಿರುವ ಸಾಮಾನ್ಯವಾದ ರೇಡ್ ಇದು ಎಂದು ಕೂಡ ಹೇಳಲಾಗ್ತಿದೆ. ‘ಕೆಜಿಎಫ್’ ಬಿಡುಗಡೆಯಾದ 3ನೇ ವಾರಕ್ಕೆ ಐಟಿ ದಾಳಿ ಆಗಿದ್ದು ಬೇಸರ ತಂದಿದೆ: ವಿಜಯ್ ಕಿರಗಂದೂರು ಬಟ್, ಸ್ಯಾಂಡಲ್ ವುಡ್ ಮಂದಿಯ ಮೇಲೆ ರೇಡ್ ಮಾಡಿದ್ದಕ್ಕೆ ಅಸಲಿ ಕಾರಣ ಮಾತ್ರ ಸಿಕ್ಕಿಲ್ಲ. ಸದ್ಯ, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್, ಯಶ್, ವಿಜಯ್ ಕಿರಗಂದೂರ್ ಅವರ ಮನೆ ಮೇಲೆ ಮಾಡಿದ್ದ ಐಟಿ ದಾಳಿ ಅಂತ್ಯವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com