NZ vs SL : ಶ್ರೀಲಂಕಾ ತಂಡಕ್ಕೆ ಸೋಲು – ಸರಣಿ ಕಿವೀಸ್ ಕೈವಶ ; ಪೆರೆರಾ ಶತಕ ವ್ಯರ್ಥ

ಮೌಂಟ್ ಮೌಂಗಾನುಯಿಯ ಬೇ ಓವಲ್ ನಲ್ಲಿ ಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ 21 ರನ್ ಜಯ ಗಳಿಸಿದೆ. ಈ ಮೂಲಕ ಕೇನ್ ವಿಲಿಯಮ್ಸನ್ ಬಳಗ 3 ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 319 ರನ್ ಮೊತ್ತ ಕಲೆಹಾಕಿತು. ಕಿವೀಸ್ ತಂಡದ ಪರವಾಗಿ ರಾಸ್ ಟೇಲರ್ 90 , ಕಾಲಿನ್ ಮುನ್ರೋ 87, ಜೇಮ್ಸ್ ನೀಶಮ್ 64 ರನ್ ಗಳಿಸಿದರು.

ಗೆಲ್ಲಲು 320 ರನ್ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಓವರ್ ಗಳಲ್ಲಿ 298ಕ್ಕೆ ಆಲೌಟ್ ಆಯಿತು. ಚೊಚ್ಚಲ ಏಕದಿನ ಶತಕ ಗಳಿಸಿದ ತಿಸಾರಾ ಪೆರೆರಾ (140) ಏಕಾಂಗಿ ಹೋರಾಟ ಶ್ರೀಲಂಕಾಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

 

 

Leave a Reply

Your email address will not be published.

Social Media Auto Publish Powered By : XYZScripts.com