ಮಲ್ಟಿ ಮಿಲಿಯನೇರ್ ಜಾರ್ಜ್ ಪನಯೌಟು ಜೊತೆ ‘ದಿ ವಿಲನ್’ ಬೆಡಗಿ ಆ್ಯಮಿ ನಿಶ್ಚಿತಾರ್ಥ

ಸ್ಯಾಂಡಲ್ ವುಡ್ ನ ‘ದಿ ವಿಲನ್’ ಬೆಡಗಿ ಆ್ಯಮಿ ಜಾಕ್ಸನ್ – ಮಲ್ಟಿ ಮಿಲೇನಿಯರ್ ಜೊತೆ ದಿ ವಿಲನ್ ಬೆಡಗಿ ಬ್ರಿಟಿಷ್ ರಿಯಲ್ ಎಸ್ಟೇಟ್ ದೊರೆ ಮಲ್ಟಿ ಮಿಲಿಯನೇರ್ ಜಾರ್ಜ್ ಪನಯೌಟು ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕ್ರಿಸ್ ಮಸ್ ಹಾಗೂ ಹೊಸ ವರ್ಷದ ರಜಾ ದಿನಗಳಿಗೆ ಆಫ್ರಿಕಾ ತೆರಳಿದ ಈ ಜೋಡಿ ಅಲ್ಲಿನ  ಜಾಂಬಿಯಾ ಕಾಡಿನಲ್ಲಿ ಉಂಗುರ ಬದಲಾಯಿಸಿಕೊಂಡಿದೆ.

ತನ್ನ ಬಾಯ್ ಫ್ರೆಂಡ್ ಜೊತೆ ಹಲವಾರು ವರ್ಷಗಳಿಂದ ಸಹ ಜೀವನ ನಡೆಸುತ್ತಿದ್ದ ಆ್ಯಮಿ ಸೋಶಿಯಲ್ ಮೀಡಿಯಾದಲ್ಲಿ ‘ ನಮ್ಮ ಜೀವನಲ್ಲಿ ಹೊಸ ಅದ್ಯಾಯ. ಲವ್ ಯು ಜಾರ್ಜ್.ಈ ಜಗತ್ತಿನಲ್ಲೇ ಅತ್ಯಂತ ಖುಷಿಯಾಗಿರುವಂತೆ ಮಾಡಿದ್ದಕ್ಕೆ ಧನ್ಯವಾದ’ ಎಂದು ಉಂಗುರುದ ಸಿಂಬಲ್ ಕೂಡ ಹಾಕಿದ್ದಾರೆ. ಈ ಮೂಲಕ 3 ವರ್ಷಗಳಿಂದ ಪ್ರೀತಿಸುತ್ತಿದ್ದ ಜಾರ್ಜ್ ಹಾಗೂ ಆ್ಯಮಿ ಪ್ರೇಮ್ ಕಹಾನಿ ಹೊರಬಂದಿದೆ. ಕನ್ನಡ , ತಮಿಳು, ಹಿಂದಿ ಸಿನಿಮಾದಲ್ಲಿ ನಟಿಸಿದ  ಆ್ಯಮಿ ಜಾಕ್ಸನ್ 2.0 ಚಿತ್ರದಲ್ಲಿ ಭಾರಿ ಹೆಸರು ಮಾಡಿದ್ದರು.ತಮ್ಮ ಯಶಸ್ಸು ಉತ್ತುಂಗದಲ್ಲಿದ್ದಾಗಲೇ ಅತೀ ಸಣ್ಣ ವಯಸ್ಸಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸಿನಿಮಾ ಮಂದಿ ಶಾಕ್ ಆಗಿದ್ದಾರೆ.

ಒಟ್ಟಿನಲ್ಲಿ ಸಿನಿ ತಾರೆಯರಿಗೆ ಹೋಲಿಕೆ ಮಾಡಿದರೆ ಅತೀ ಸಣ್ಣ ವಯಸ್ಸಿನಲ್ಲಿ ಹೊಸ ಜೀವನಕ್ಕೆ ರೆಡಿಯಾದ ನೀಲಿ ಕಂಗಳ ಸುಂದರಿ ಆ್ಯಮಿ ಜಾಕ್ಸನ್ ನಿಶ್ಚಿತಾರ್ಥ ಮಾಡಿಕೊಂಡಿರುವುದು ಎಲ್ಲರಿಗೂ ಶಾಕ್ ಕೊಟ್ಟಿದೆ.

Leave a Reply

Your email address will not be published.