ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ ಬೆಂಗಳೂರಿನ ಪೊಲೀಸರಿಂದ ಖತರ್ನಾಕ್ ಮರಗಳ್ಳರು ಅರೆಸ್ಟ್..!

ಮೂರು ವರ್ಷದಿಂದ ಪತ್ತೆ ಹಚ್ಚಲು ಸವಾಲಾಗಿದ್ದ ಮರಗಳ್ಳರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು.. ಹೊಸಕೋಟೆಯ ಕಟ್ಟಿಗೇನಹಳ್ಳಿಯಲ್ಲಿ  ಬೆಂಗಳೂರಿನ ಪೊಲೀಸರಿಂದ ಖತರ್ನಾಕ್ ಮರಗಳ್ಳರನ್ನು ಬಂಧಿಸಲಾಗಿದೆ. ರಿಯಾಜ್ ಮತ್ತು ಮಗ ಸೈಯದ್ ಶೇಖ್ ಬಂಧಿತರಾಗಿದ್ದು, ಇವರು ಬೇರೆ ರಾಜ್ಯದಲ್ಲಿ ಅಲ್ಲದೇ ರಾಜ್ಯಾದ್ಯಂತ ಮರಗಳ್ಳತನ ಮಾಡುತ್ತಿದ್ದರು ಎನ್ನು ಮಾಹಿತಿ ಆಧಾರದ ಮೇಲೆ 200 ಪೊಲೀಸರು ನಿನ್ನೆ ರಾತ್ರಿ ಇಡೀ ಕಾರ್ಯಚರಣೆ ಬಳಿಕ ಇವರಿಬ್ಬರನ್ನು ಬಂಧಿಸಿದ್ದಾರೆ. 

ಬಂಧಿತರು ಮರಗಳ್ಳತನ ಅಲ್ಲದೇ ಮುಖ್ಯ ಕಾರ್ಯದರ್ಶಿ, ನ್ಯಾಯಾಧೀಶರ ಮನೆಯಲ್ಲಿ ಕಳವು ಮಾಡಿರುವ ಆರೋಪವಿದೆ ಎನ್ನಲಾಗಿದೆ. ಜೊತೆಗೆ ಆರೋಪಿಗಳಿಂದ ನಕಲಿ ನಂಬರ್ಪ್ಲೇಟ್, ಕಾರು, ಚಿನ್ನಾಭರಣಗಳು, ಹಣದ ಕಂತೆ, ಶ್ರೀಗಂಧದ ಮರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.  

ಅತ್ಯಂತ ಗುಪ್ತವಾಗಿ ಮರಗಳ್ಳತನ ಮಾಡುತ್ತಿದ್ದ ಖದೀಮರು ಸಾಕಷ್ಟು ಹೊಂಚು ಹಾಕಿ ಕಳ್ಳತನಕ್ಕೆ ಕೈ ಹಾಕುತ್ತಿದ್ದರು ತಂದೆ ಮಗ. ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ಬರುತ್ತಿರಲಿಲ್ಲ. ಮನೆಯಲ್ಲೇ ಕುಳಿತು ದರೋಡೆ ಮಾಡಿಸುತ್ತಿದ್ದರು. ನಂಬರ್ ಪ್ಲೇಟ್ ಕೂಡ ಇವರೇ ರೆಡಿ ಮಾಡಿಕೊಳ್ಳುತ್ತಿದ್ದರು. ತಂದೆ ಮತ್ತು ಮಗ 35 ಲಕ್ಷ ನಗದು ಹಣ ಮನೆಯಲ್ಲೇ ಇತ್ತು. 300 ಕ್ಕೆ ಮರ ಖರೀದಿ ಮಾಡಿ ಸಾವಿರಾರು ರೂಪಾಯಿಗೆ ಮರ ಮಾರಾಟ ಮಾಡುತ್ತಿದ್ದರು. ಬೇರೆ ಬೇರೆ ಕಡೆಗೆ ಮರಗಳನ್ನು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇಂತಹ ದರೋಡೆ ಕೋರರನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com