Bigg Boss 6 : ಈ ಬಾರಿ ಕಾರಾಗೃಹಕ್ಕೆ ಹೋದ ಸ್ಪರ್ಧಿಗಳು ಅಸಮಾಧಾನ ಆಗಿದ್ದು ಯಾಕೆ..?

ದೈನಂದಿನ ಚಟುವಟಿಕೆ, ಕಳಪೆ ಪ್ರದರ್ಶನ, ಅಡುಗೆ ಕೆಲಸದಲ್ಲಿ ತೋರಿದ ನಿರ್ಲಕ್ಷ್ಯವನ್ನು ಗಮನಿಸಿ ಮನೆಯ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಬೇಕು. ಆಯ್ಕೆ ಯಾದ ಇಬ್ಬರು ಸದಸ್ಯರನ್ನು ಕಾರಾಗೃಹಕ್ಕೆ ಕಳುಹಿಸಿಬೇಕು.  ಬಿಗ್ ಬಾಸ್ ಈ ಕೆಲಸವನ್ನು ಕ್ಯಾಪ್ಟನ್ ಆ್ಯಂಡಿ ಗೆ ನೀಡಿದ್ದರು.  ಆದರೆ ಈ ವಿಚಾರಕ್ಕೆ ಆ್ಯಂಡಿ ಆಯ್ಕೆ ಮಾಡಿದ ಜೀವಿತ ಹಾಗೂ ರಶ್ಮಿ ಇಬ್ಬರು ಸದಸ್ಯರು ಅಸಮಧಾನವನ್ನು ವ್ಯಕ್ತಪಡಿಸಿದರು.

ಯಾಕೆ ಗೊತ್ತಾ..? ಆ್ಯಂಡಿ ಆಯ್ಕೆ ಮಾಡುವಾಗ ಸೂಕ್ತ ಕಾರಣಗಳಿಲ್ಲದೆ ಆಯ್ಕೆ ಮಾಡಿದ್ದಾರೆ. ಬಿಗ್ ಬಾಸ್ ಕೊಟ್ಟ ಕಾರಣಗಳಲ್ಲಿ ನಾವು ಪಾಲುದಾರರಲ್ಲ ಎಂದು ಬೇಸರಗೊಂಡರು. ಜೀವಿತ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್ ಅನ್ನೋ ಕಾರಣಕ್ಕೆ ನನಗೆ ಈ ರೀತಿ ಆಗುತ್ತಿದೆ ಎಂದು ಕಣ್ಣೀರಿಟ್ಟರೆ.. ಕ್ಯಾಪ್ಟನ್ ಆಗೋದನ್ನ ತಡೆಯಲು ಕಾಯ್ತಾಯಿದ್ದರೆ ಎಲ್ಲರೂ ಎಂದು ರಶ್ಮಿ ಬೇಸರ ವ್ಯಕ್ತಪಡಿಸಿದರು.

ಅಸಮಾಧಾನದಿಂದಲೇ ರಶ್ಮಿ ಹಾಗೂ ಜೀವಿತ ಕಾರಾಗೃಹವನ್ನು ಪ್ರವೇಶ ಮಾಡಿದರು.

 

Leave a Reply

Your email address will not be published.

Social Media Auto Publish Powered By : XYZScripts.com