ಗ್ರಾಹಕರಿಗಾಗಿ ಹೊಸ ವರ್ಷಕ್ಕೆ ರಿಲಾಯನ್ಸ್ ಜಿಯೋ ಭರ್ಜರಿ ಆಫರ್‌

ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಗ್ರಾಹಕರಿಗಾಗಿ ಭರ್ಜರಿ ಆಫರ್‌ ಘೋಷಿಸಿದೆ. ಪ್ರಿಪೇಯ್ಡ್ ಬಳಕೆದಾರರಿಗೋಸ್ಕರ ಬಿಡುಗಡೆ ಮಾಡಿರುವ ಈ ಆಫರ್‌ನಲ್ಲಿ 100% ಕ್ಯಾಷ್ ಬ್ಯಾಕ್ ಸೌಲಭ್ಯವನ್ನು Jio ನೀಡಿದೆ

399 ರೂ.ಗಳ ರೀಚಾರ್ಜ್ ಮಾಡಿಸಿದರೆ ಮೈಜಿಯೋ ಕೂಪನ್ ಸೆಕ್ಷನ್ ನಲ್ಲಿ ಕೂಪನ್ ಕ್ರೆಡಿಟ್ ಆಗಲಿದೆ. ನಂತರ ಎಜಿಯೋ ಆಪ್ ಅಥವಾ ವೆಬ್ ಸೈಟ್ ನಲ್ಲಿ ಕೂಪನ್ ನ್ನು ಬಳಕೆ ಮಾಡಬಹುದಾಗಿದೆ.

ಬಳಕೆದಾರರಿಗೆ 100% ಕ್ಯಾಷ್ ಬ್ಯಾಕ್ ಆಫರ್ Ajio ಕೂಪನ್ ಮೂಲಕ ಸಿಗಲಿದೆ. ಬಳಕೆದಾರರು ಅದನ್ನು ಬಳಿಕ ರೀಡೀಮ್ ಮಾಡಿಕೊಳ್ಳಬಹುದು. Ajio, ರಿಲಯನ್ಸ್ ರೀಟೆಲ್ಸ್ ನ ಇ-ಕಾಮರ್ಸ್ ಅಂಗವಾಗಿದ್ದು, ಕೂಪನ್ ಇದ್ದವರು ajio.com ನಲ್ಲಿ ಶಾಪಿಂಗ್ ಮಾಡುವ ಮೂಲಕ ಕೂಪನನ್ನು ರಿಡೀಮ್ ಮಾಡಿಕೊಳ್ಳಬಹುದು.

ಹೊಸ ಹಾಗೂ ಈಗಿರುವ ಜಿಯೋ ಗ್ರಾಹಕರಿಗೆ ಈ ಆಫರ್ ಅನ್ವಯವಾಗಲಿದ್ದು ಜ.31 ವರೆಗೆ ಲಭ್ಯವಿರಲಿದೆ. ಕೂಪನ್ ಗಳನ್ನು ಮಾರ್ಚ್ 15 ಒಳಗೆ ಬಳಕೆ ಮಾಡಬಹುದಾಗಿದೆ.

ಕಳೆದ ವರ್ಷವೂ Jio ಇಂತಹದ್ದೇ ಆಫರನ್ನು ಪ್ರಕಟಿಸಿತ್ತು. ಆದರೆ ಅದು ಮೈಜಿಯೋ ಆಯಪ್ ನಲ್ಲಿ ಮಾತ್ರ ರಿಡೀಮ್ ಮಾಡಬಹುದಾಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com