‘ದೋಸ್ತಿ ಸರ್ಕಾರ ಬೀಳಿಸಲು ಅಡ್ಡಿಯಾಗಬಾರದು ಎಂದು ವಿದೇಶಕ್ಕೆ ಹೋಗಿದ್ದೆ’ – ಸಿಎಂ

ದೋಸ್ತಿ ಸರಕಾರ ಉರುಳಿಸಲು ಡೆಡ್ಲೈನ್ಹಾಕಿಕೊಂಡಿದ್ದವರ ಕೆಲಸಕ್ಕೆ ಅಡ್ಡಿ ಆಗಬಾರದು ಎಂಬ ಕಾರಣಕ್ಕೆ ವಿದೇಶ ಪ್ರವಾಸ ಹೋಗಿದ್ದೇ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಸರಕಾರ ಉರುಳಿಸಲು ಪಾಪ ಬಿಜೆಪಿಯ ಕೆಲವರು ಗಡುವು ಹಾಕಿಕೊಂಡಿದ್ದರು. ಅವರ ಪ್ರಯತ್ನಕ್ಕೆ ತೊಂದರೆ ಆಗದಿರಲಿ ಎಂದೇ ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದೆ ಎಂದು ಕುಮಾರಸ್ವಾಮಿ ಜೆಡಿಎಸ್ ಸಭೆಯಲ್ಲಿ ಹೇಳಿದ್ದಾರೆ.

ಬಿಜೆಪಿ ಶಾಸಕರಾದ ಉಮೇಶ್ ಕತ್ತಿ ಅವರು 6ನೆ ತಾರೀಖಿನೊಳಗೆ ಸರಕಾರ ರಚಿಸುತ್ತೇವೆ ಎಂದಿದ್ದರು. ಹೊಸ ಸರಕಾರ ರಚಿಸಿಕೊಳ್ಳಲು ನನ್ನಿಂದ ತೊಂದರೆಯಾಗಬಾರದೆಂದು ನಾನು ವಿದೇಶಕ್ಕೆ ಹೋಗಿದ್ದೆ. ಆದರೆ ಮೇಲೊಬ್ಬ ದೇವರು ಇದ್ದಾನಲ್ಲ, ಅವನ ರಕ್ಷಣೆ ನಮ್ಮ ಮೇಲೆ ಇದೆ ಎಂದು ಎಚ್ಡಿಕೆ ಹೇಳಿದರು.

ರೈತರಿಗೆ ನಾನು ಲಾಲಿಪಾಪ್ ಕೊಟ್ಟಿದ್ದೇನೆಂದು ಪ್ರಧಾನಿಗಳು ಹೇಳಿದ್ದಾರೆ. ಪ್ರಧಾನಿ ಸ್ಥಾನದಲ್ಲಿ ಇರುವವರು ಜವಾಬ್ದಾರಿಯಿಂದ ಮಾತನಾಡಬೇಕು. ಸಾಲಮನ್ನಾ ಮಾಡಿದ ಮೇಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇನೆ. ಆತ್ಮಹತ್ಯೆಗೆ ಬೇರೆ ಕಾರಣಗಳೂ ಇವೆ ಎಂದು ಹೇಳಿದರು.

ಮಧ್ಯೆ ರೈತರ ಸಾಲಮನ್ನಾ ವಿಷಾರವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದರೂ ಸಿಎಂ ಕುಮಾರಸ್ವಾಮಿ ಮೇಲೆ ಬಿಜೆಪಿ ಹರಿಹಾಯುತ್ತಿರುವುದಕ್ಕೆ ಮಾಜಿ ಪಿಎಂ ದೇವೇಗೌಡರು ತೀವ್ರ ಬೇಸರ ವ್ಯಕ್ತಪಡಿಸಿದರು.

ಯಾರೂ ಆಗದವರನ್ನು ನಂಬಿಸಲು ಸಿಎಂ ಎಚ್ಡಿಕೆ ತಮ್ಮ ಏಕೈಕ ಪುತ್ರನ ಮೇಲೆ ಆಣೆ ಪ್ರಮಾಣ ಮಾಡುವಂತಾದ ಬಗ್ಗೆ ದೇವೇಗೌಡರು ತೀವ್ರ ಹತಾಶೆ ತೋಡಿಕೊಂಡುರು

Leave a Reply

Your email address will not be published.

Social Media Auto Publish Powered By : XYZScripts.com