Sydney Test : ರಿಷಭ್ ಪಂತ್ ಅಜೇಯ ಶತಕ – 622ಕ್ಕೆ ಡಿಕ್ಲೇರ್ ಮಾಡಿಕೊಂಡ ಭಾರತ

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಕಲೆಹಾಕಿದ್ದು, 622ಕ್ಕೆ ಡಿಕ್ಲೇರ್ ಮಾಡಿಕೊಂಡಿದೆ.

193 ರನ್ ಗಳಿಸಿ ನೇಥನ್ ಲಾಯನ್ ಎಸೆತದಲ್ಲಿ ಔಟಾದ ಚೇತೇಶ್ವರ ಪೂಜಾರಾ ದ್ವಿಶತಕ ವಂಚಿತರಾದರು. ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ 2ನೇ ಟೆಸ್ಟ್ ಶತಕ ಬಾರಿಸಿದರು. 189 ಎಸೆತಗಳನ್ನು ಎದುರಿಸಿದ ರಿಷಭ್ ಪಂತ್ 15 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 159 ರನ್ ಗಳಿಸಿದರು. ಅರ್ಧಶತಕ ದಾಖಲಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ (81) 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

ಪ್ರಥಮ ಇನ್ನಿಂಗ್ಸ್ ಆರಂಭಿಸಿರುವ ಆತಿಥೇಯ ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 24 ರನ್ ಸೇರಿಸಿದ್ದು, ಭಾರತಕ್ಕಿಂತ 598 ರನ್ ಹಿನ್ನಡೆಯಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com