NZ vs SL : ಮಾರ್ಟಿನ್ ಗಪ್ಟಿಲ್ ಶತಕ – ಕಿವೀಸ್ ತಂಡಕ್ಕೆ 45 ರನ್ ಜಯ

ಮೌಂಟ್ ಮೌಂಗಾನುಯಿಯ ಬೇ ಓವಲ್ ನಲ್ಲಿ ಗುರುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆತಿಥೇಯ ನ್ಯೂಜಿಲೆಂಡ್ ತಂಡ 38 ರನ್ ಜಯ ದಾಖಲಿಸಿದೆ. ಇದರೊಂದಿಗೆ ಕೇನ್ ವಿಲಿಯಮ್ಸನ್ ಬಳಗ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 371 ರನ್ ಗಳ ಬೃಹತ್ ಮೊತ್ತ ಸೇರಿಸಿತು. ಕಿವೀಸ್ ಆರಂಭಿಕ ಬ್ಯಾಟ್ಸಮನ್ ಮಾರ್ಟಿನ್ ಗಪ್ಟಿಲ್ ಅಮೋಘ ಶತಕ ಬಾರಿಸಿದರು. 139 ಎಸೆತಗಳನ್ನು ಎದುರಿಸಿದ ಮಾರ್ಟಿನ್ ಗಪ್ಟಿಲ್ 11 ಬೌಂಡರಿ ಹಾಗೂ 5 ಸಿಕ್ಸರ್ ಗಳನ್ನೊಳಗೊಂಡ 138 ರನ್ ಗಳಿಸಿದರು.

ಗೆಲ್ಲಲು 372 ರನ್ ಗಳ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ 49 ಓವರ್ ಗಳಲ್ಲಿ 326ಕ್ಕೆ ಆಲೌಟ್ ಆಯಿತು.

Leave a Reply

Your email address will not be published.