ಐಟಿ ದಾಳಿಗೆ ನಲುಗಿದ ಚಂ ‘ಧನ’ ವನ : ಮುಂದುವರೆದ ಪರಿಶೀಲನೆ ಕಾರ್ಯ

ಚಂದನ ವನಕ್ಕೆ ನಿನ್ನೆ ಐಟಿ ಶಾಕ್ ನೀಡಿರುವ ಬೆನ್ನಲ್ಲೆ ಸಾಕಷ್ಟು ಪರಿಶೀಲನ ಕಾರ್ಯ ಮುಂದುವರೆದಿದೆ.

ಜೆ.ಪಿ ನಗರದಲ್ಲಿರುವ ಸುದೀಪ್ ಅವರ ಮನೆಗೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಹಿಳಾ ಅಧಿಕಾರಿ ಸೇರಿದಂತೆ ಪುರುಷ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ಸುದೀಪ್ ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ಹೆಂಡತಿ ಪ್ರಿಯಾ ಅವರ ಹೆಸರಲ್ಲಿ ಇವೆಂಟ್ ಕಂಪನಿ ತೆರೆಯಲಾಗಿತ್ತು. ಪತ್ನಿ ಹಾಗೂ ಮಗಳ ಹೆಸರಲ್ಲಿ ಹೆಚ್ಚು ಆಸ್ತಿ ಮಾಡಿದ್ದರು. ಇವರನ್ನು ಕುಲಂಕುಶವಾಗಿ ತನಿಖೆ ಮಾಡಲಾಗುತ್ತದೆ. ಬ್ಯಾಂಕ್ ಅಕೌಂಟ್, ಹೂಡಿಕೆ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಅವರ ಮನೆಯಲ್ಲಿ ಚಿನ್ನಾಭರಣ ಸಿಕ್ಕಿಲ್ಲ, ದಾಖಲಾತಿಗಳು ಸಿಕ್ಕಿವೆ ಎನ್ನುವ ಮಾಹಿತಿ ಲಭ್ಯವಾಗಿದ್ದು ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.

ಶಿವರಾಜಕುಮಾರ್ ಅವರ ಮನೆಯಲ್ಲೂ ಪರಿಶೀಲನೆ ಮಾಡಲಾಗುತ್ತಿದೆ. ಇವರು ಬಿಸಿನೆಸ್ ಮ್ಯಾನ್ ಆಗಿರುವದರಿಂದ ಕಂಪ್ಯೂಟರ್, ಹಾರ್ಡ್ ಡಿಸ್ಕ್ ತಪಾಸಣೆ ಮಾಡಲಾಗುತ್ತಿದೆ. ಇಬ್ಬರು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಶಿವರಾಜಕುಮಾರ ಅವರು ತುಂಬಾನೇ ಕೂಲ್ ಆಗಿದ್ದಾರೆ. ನಿನ್ನೆಯಿಂದಲೂ ಅವರು ಮನೆಯಲ್ಲೇ ಇದ್ದು ಐಟಿ ಅಧಿಕಾರಿಗಳಿಗೆ ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ. ಚಿನ್ನಾಭರಣದ ಕುರಿತು ಪತ್ನಿ ಶಿವರಾಜಕುಮಾರ್ ಬಳಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಇನ್ನೂ ರಾಕ್ ಲೈನ್ ವೆಂಕಟೇಶ್ ಮನೆ ಶೋಧನೆ ಮಾಡುತ್ತಿರುವ ಅಧಿಕಾರಿಗಳು ಆನ್ ಲೈನ್ ಮೂಲಕ ತಿಂಡಿಯನ್ನು ತರಿಸಿಕೊಂಡಿದ್ದಾರೆ. ನಿನ್ನೆಯಿಂದ 16 ಗಂಟೆಗಳ ಕಾಲ ಆರು ಜನ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ.  6 ಅಧಿಕಾರಿಗಳು ರಾಕ್ ಲೈನ್ ವೆಂಕಟೇಶ ಮನೆಯಲ್ಲಿ ಪತ್ನಿ ಮತ್ತು ಸೊಸೆಗೆ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ.

ಪುನಿತ್ ಮನೆಯಲ್ಲೂ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಅಧಿಕಾರಿಗಳು. ಪುನೀತ್ ಮತ್ತು ಪತ್ನಿ ಅಶ್ವಿನಿ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.  ಎಲ್ಲಿಂದ ಆದಾಯ ಪಡೆಯುತ್ತಿದ್ದಾರೆ. ಇನ್ ಕಂ ಟ್ಯಾಕ್ಸ್ ಕಟ್ಟುತ್ತಿದ್ದೀರಾ?  ಈ ಬಗ್ಗೆ ಅಶ್ವೀನಿ ಅವರನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಯಶ್ ಮನೆಯ ಮೇಲೂ ಐಟಿ ದಾಳಿ ನಡೆಸಿ ವಿಚಾರಣೆ ನಡೆಸುತ್ತಿದ್ದಾರೆ. ರಾಧಿಕಾ ತಂದೆ ಮನೆಗೆ ಅಧಿಕಾರಿಗಳ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗಾಯತ್ರಿ ನಗರದಲ್ಲಿರುವ ಯಶ್ ಮಾನವನ ಮನೆಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಈವರೆಗೆ 5 ಜನ ಐಟಿ ಅಧಿಕಾರಿಗಳ ಭೇಟಿ ನೀಡಿದ್ದಾರೆ.

 

 

Leave a Reply

Your email address will not be published.