Bigg Boss 6 – ‘ಬೆಳ್ಳೂರು ಕ್ರಾಸ್’ ಮತ್ತು ‘ಕರ್ಮ’ ಸಿನಿಮಾ ರಿಲೀಸ್

ಬೆಳ್ಳೂರು ಕ್ರಾಸ್ ಹಾಗೂ ಕರ್ಮ ಸಿನಿಮಾ ರಿಲೀಸ್ ಆಗಿದೆ. ಎರಡೂ ಸಿನಿಮಾ ವನ್ನು ನೋಡಿದ ಎಸ್. ನಾರಾಯಣ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ಈ ಎರಡೂ ಸಿನಿಮಾದ ನಿರ್ಮಾಪಕ ಯಾರು ಗೊತ್ತಾ ..? ಅದು ಬೇರೆ ಯಾರೂ ಅಲ್ಲ ಮಿಸ್ಟರ್ ಧನರಾಜ್ . ಧನರಾಜ್ ಸಿನಿಮಾದ ನಿರ್ಮಾಪಕನಾದರೆ ನಿರ್ದೇಕರು ಪಾತ್ರ ಇಬ್ಬರೂ. ಬೆಳ್ಳೂರು ಕ್ರಾಸ್ ಸಿನಿಮಾವನ್ನು ಆಂಡಿ ನಿರ್ದೇಶನ ಮಾಡಿದರೆ. ಕರ್ಮ ಸಿನಿಮಾವನ್ನು ಶಶಿ ನಿರ್ದೇಶನ ಮಾಡಿದ್ದಾರೆ.  ವಿಶೇಷ ಅತಿಥಿಯಾಗಿ ಆಗಮಿಸಿರುವ ನಿರ್ದೇಶಕ ಹಾಗೂ ನಟ  ಎಸ್. ನಾರಾಯಣ್ ಅವರು ಎರಡು ಚಿತ್ರವನ್ನು ವೀಕ್ಷಿಸಿ ದಿಬೆಸ್ಟ್ ಸಿನಿಮಾ ಹಾಗೂ ಪಾತ್ರಧಾರಿಗಳನ್ನ ಆಯ್ಕೆ ಮಾಡಿದರು. ಇನ್ನೂ ಬೆಳ್ಳೂರು ಕ್ರಾಸ್ ಸಿನಿಮಾದಲ್ಲಿ ನವೀನ್ ಮತ್ತು ಅಕ್ಷತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ. ಕರ್ಮ ಸಿನಿಮಾದಲ್ಲಿ ರಾಕೇಶ್ ಮತ್ತು ಜೀವಿತಾ ನಾಯಕ ನಯಕಿಯಾಗಿ ಆಯ್ಕೆಯಾದರು.

ಎರಡು ಸಿನಿಮಾವನ್ನು ವೀಕ್ಷಿಸಿದ ಎಸ್. ನಾರಾಯಣ್ ಅವರು ಬೆಳ್ಳೂರು ಕ್ರಾಸ್ ಸಿನಿಮಾವನ್ನು ಅತ್ಯುತ್ತಮ ಸಿನಿಮಾ ಎಂದು ಆಯ್ಕೆ ಮಾಡಿ  ‘ಬಿಗ್ ಬಾಸ್ ಫಿಲ್ಮ್ ಅವಾರ್ಡ್’ ನ್ನು ನೀಡಿದರು.  ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಶಶಿ, ಅತ್ಯುತ್ತಮ ನಟಿಯ ಪ್ರಶಸ್ತಿಗೆ ಅಕ್ಷತಾ, ಅತ್ಯುತ್ತಮ ನಾಯಕ ನಟನಾಗಿ ರಾಕೇಶ್,  ಉತ್ತಮ ಪೋಷಕ ಕಲಾವಿದರಾಗಿ ಧನರಾಜ್ ಅವರಿಗೆ ಎಸ್. ನಾರಾಯಣ್ ಪ್ರಶಸ್ತಿ ಪ್ರಧಾನ ಮಾಡಿದರು.

ನಿಮಗೂ ಕೂಡ ಬೆಳ್ಳೂರು ಕ್ರಾಸ್ ಹಾಗೂ ಕರ್ಮ ಚಿತ್ರ ನೋಡುವ ಆಸೆ ಇದ್ದರೆ ನಿನ್ನೆಯ ಬಿಗ್ ಬಾಸ್ ಎಪಿಸೋಡ್ ನೋಡಿ.

Leave a Reply

Your email address will not be published.

Social Media Auto Publish Powered By : XYZScripts.com