2000 ರೂ. ಮುಖಬೆಲೆಯ ನೋಟುಗಳ ಮುದ್ರಣ ಸ್ಥಗಿತ ಸಾಧ್ಯತೆ : RBI ತೀರ್ಮಾನ

ನೋಟು ಅಮಾನ್ಯದ ಕಹಿ ನೆನಪು ಸಂಪೂರ್ಣ ಮಾಸುವ ಮುನ್ನವೇ ಈಗ 2000 ರೂ ನೋಟಿಗೂ ಅದೇ ಗತಿ ಬಂದೊದಗುವ ಅಪಾಯ ಎದುರಾಗಿದೆ.

ಒಂದು ಸಾವಿರ ರೂ ನೋಟಿನ ಬದಲಿಗೆ ಚಲಾವಣೆಗೆ ಬಂದ ಹೊಸ 2000 ರೂ ಮುಖಬೆಲೆಯ ನೋಟುಗಳ ಮುದ್ರಣವನ್ನು ಬಹುತೇಕ ಸ್ಥಗಿತಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್ ತೀರ್ಮಾನ ಕೈಗೊಂಡಿದೆ.

ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಏಕಾಏಕಿ 500 ಹಾಗೂ 1000 ರೂ ಮುಖಬೆಲೆಯ ಚಲಾವಣೆ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದ್ದರು. ಇದರಿಂದ ಸಾಕಷ್ಟು ಜನ ಸಂಕಷ್ಟ ಅನುಭವಿಸಿದ್ದರು.

ಅದೇ ಒಂದು ಸಾವಿರ ರೂ ಬದಲು ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಡಲಾಗಿತ್ತು. ಬಳಿಕ 500 ರೂ ನೋಟುಗಳೂ ಹೊಸ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದವು.

ಈಗ 2000 ರೂ ಮುಖಬೆಲೆಯ ನೋಟುಗಳ ಚಲಾವಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಕಾರಣ ಮುಂದೊಡ್ಡಿ ಅದನ್ನೂ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. ಇದರ ಮೊದಲ ಭಾಗವಾಗಿ ಮುದ್ರಣವನ್ನು ತೀರಾ ಅಲ್ಪ ಪ್ರಮಾಣಕ್ಕೆ ಕಡಿತಗೊಳಿಸಲಾಗುತ್ತಿದೆ.

ಇದರಿಂದ ಕ್ರಮೇಣವಾಗಿ 2 ಸಾವಿರ ರೂ. ನೋಟನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಕೆಲ ಮಾಧ್ಯಮ ವರದಿಗಳು ಅಭಿಪ್ರಾಯಪಟ್ಟಿವೆ.

ನೋಟು ರದ್ದತಿ ಬಳಿಕ ಮಾರ್ಚ್​, 2018 ರವರೆಗೆ ದೇಶದಲ್ಲಿ ಒಟ್ಟು 18.03 ಲಕ್ಷ ಕೋಟಿ ರೂ. ಕರೆನ್ಸಿ ಚಲಾವಣೆಯಲ್ಲಿದ್ದು, ಇದರಲ್ಲಿ 6.73 ಲಕ್ಷ ಕೋಟಿ ರೂ. ಅಥವಾ ಶೇ.37ರಷ್ಟು 2,000 ರೂ. ನೋಟುಗಳು ಎಂಬ ಅಂಶ ಈ ನೀರ್ಧಾರಕ್ಕೆ ಕಾರಣವಾಗಿರಬಹುದು.

Leave a Reply

Your email address will not be published.