ಸ್ಯಾಂಡಲ್ವುಡ್ ಗೆ ಐಟಿ ಶಾಕ್ – ನಟ, ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ

ಗುರುವಾರ ಬೆಳ್ಳಂಬೆಳಿಗ್ಗೆ ಸ್ಯಾಂಡಲ್ವುಡ್ ನಟ ಹಾಗೂ ನಿರ್ಮಾಪಕರಿಗೆ ಐಟಿ ಇಲಾಖೆ ದೊಡ್ಡ ಶಾಕ್ ನೀಡಿದೆ. ಸ್ಯಾಂಡಲ್ವುಡ್ ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್ ಹಾಗೂ ಯಶ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ವಿಜಯ್ ಕಿರಗುಂದೂರು, ಸಿ.ಆರ್ ಮನೋಹರ್ ಹಾಗೂ ಸಿ. ಜಯಣ್ಣ ಅವರ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕ ಹಾಗೂ ಗೋವಾ ವಲಯದ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಕೆಜಿಎಫ್ ಹಾಗೂ ದಿ ವಿಲನ್ ಚಿತ್ರದ ನಿರ್ಮಾಪಕರ ಮನೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ, ಕಡತಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಕನ್ನಡ ಚಿತ್ರೋದ್ಯಮದಿಂದ ಪ್ರತಿ ವರ್ಷ ಮನೋರಂಜನಾ ತೆರಿಗೆಯನ್ನು ಸಂದಾಯ ಮಾಡಲಾಗುತ್ತದೆ. ಈ ವರ್ಷ ಸಹ ಕನ್ನಡ ಚಿತ್ರರಂಗದಿಂದ ಟ್ಯಾಕ್ಸ್ ಅನ್ನು ಪಾವತಿಸಲಾಗಿದೆ. ಸ್ಯಾಂಡಲ್ವುಡ್ ನಲ್ಲಿ ಕೆಜಿಎಫ್. ದಿ ವಿಲನ್ ನಂತಹ ಬಿಗ್ ಬಜೆಟ್ ಚಿತ್ರಗಳ ನಿರ್ಮಾಣ ಹೆಚ್ಚಾಗುತ್ತಿದೆ, ಆದರೆ ತೆರಿಗೆ ಸಂದಾಯ ಮಾಡುವ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

 

One thought on “ಸ್ಯಾಂಡಲ್ವುಡ್ ಗೆ ಐಟಿ ಶಾಕ್ – ನಟ, ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ

Leave a Reply

Your email address will not be published.

Social Media Auto Publish Powered By : XYZScripts.com