Tennis : ಗಾಯದ ಸಮಸ್ಯೆ ಹಿನ್ನೆಲೆ – ಬ್ರಿಸ್ಬೇನ್ ಟೆನಿಸ್ ಟೂರ್ನಿಯಿಂದ ರಫೆಲ್ ನಡಾಲ್ ಹೊರಕ್ಕೆ

ಬ್ರಿಸ್ಬೇನ್, ಜ.2(ವಾರ್ತಾ)- ಸ್ಪೇನ್ ನ ಸ್ಟಾರ್ ಟೆನಿಸ್ ಆಟಗಾರ ರಫೆಲ್ ನಡಾಲ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಬ್ರಿಸ್ಬೇನ್ ಟೆನಿಸ್ ಟೂರ್ನಿಯಿಂದ ಹೊರಗುಳಿಯುವುದಾಗಿ ಬುಧವಾರ ಪ್ರಕಟಿಸಿದ್ದಾರೆ. ಗಾಯ ಇನ್ನೂ ಮಾಸದ ಕಾರಣ, ನಡಾಲ್ ಟೂರ್ನಿಯಿಂದ ನಿರ್ಗಮಿಸಲಿದ್ದಾರೆ. ನಡಾಲ್ ಅವರಿಗೆ ಮೊದಲ ಪಂದ್ಯದಲ್ಲಿ ಬೈ ಲಭಿಸಿತ್ತು. ವೈದ್ಯರ ಸಲಹೆಯ ಮೇರೆಗೆ ಈ ತೀರ್ಮಾನ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ವರ್ಷದ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯ ಮೇಲೆ ಕಣ್ಣು ನೆಟ್ಟಿರುವ ನಡಾಲ್ ಅಂಗಳ ಪ್ರವೇಶಿಸುವ ಕನಸು ಹೊಂದಿದ್ದಾರೆ. ವಿಶ್ವದ ಎರಡನೇ ಶ್ರೇಯಾಂಕಿತ ರಫೆಲ್ ನಡಾಲ್, ಯು.ಎಸ್ ಓಪನ್ ಸೆಮಿಫೈನಲ್ ನಿಂದ ಈವರೆಗೆ ಒಂದೂ ಟೂರ್ನಿ ಆಡಿಲ್ಲ. ಇವರ ಹಿಮ್ಮಡಿಗೆ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಇತ್ತೀಚಿಗೆ ನಡಾಲ್‍, ಅಬುದಾಬಿಯಲ್ಲಿ ನಡೆದ ಪ್ರದರ್ಶನ ಪಂದ್ಯವೊಂದರಲ್ಲಿ ದಕ್ಷಿಣ ಆಫ್ರಿಕಾದ ಕೇವಿನ್ ಆಂಡರ್ಸನ್ ವಿರುದ್ಧ ಸೋಲು ಕಂಡಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com