Sydney Test : ಭಾರತಕ್ಕೆ ಸರಣಿ ಜಯದ ಗುರಿ – ಇತಿಹಾಸ ನಿರ್ಮಿಸುವ ಕನಸಿನಲ್ಲಿ ಕೊಹ್ಲಿಪಡೆ

ಸಿಡ್ನಿ ಟೆಸ್ಟ್ ಅಂಗಳದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾ ಗೆಲುವಿಗೆ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ವಿರಾಟ್ ಪಡೆ, ಕಾಂಗರೂ ನಾಡಿನಲ್ಲಿ ಇತಿಹಾಸ ನಿರ್ಮಿಸೋಕೆ ಪ್ಲಾನ್ ಮಾಡಿಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಬಲಾಢ್ಯವಾಗಿರುವ ಟೀಮ್ ಇಂಡಿಯಾ ಪ್ಲೇಯರ್ಸ್, ತಂಡದ ಜಯದಲ್ಲಿ ಮಿಂಚಲು ಪ್ಲಾನ್ ಮಾಡಿಕೊಂಡಿದ್ದಾರೆ.
ಈಗಾಗಲೇ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿರುವ ವಿರಾಟ್ ಪಡೆ, ಕಾಂಗರೂ ನಾಡಿನಲ್ಲಿ ಇತಿಹಾಸದ ಕನಸು ಕಾಣ್ತಾ ಇದೆ. ಭರ್ಜರಿ ಫಾರ್ಮ್ ನಲ್ಲಿರುವ ಪ್ಲೇಯರ್ಸ್, ಕಠಿಣ ತಾಲೀಮು ನಡೆಸಿದ್ದಾರೆ. ಸಿಡ್ನಿ ಪಿಚ್ ಸ್ಪಿನ್ ಬೌಲರ್ಸ್ ಗಳಿಗೆ ನೆರವಾಗುವ ಸಾಧ್ಯತೆ ಇದ್ದು, ಬ್ಲ್ಯೂ ಬಾಯ್ಸ್ ಇಬ್ಬರು ಸ್ಪಿನ್ನರ್ ಗಳೊಂದಿಗೆ ಕಣಕ್ಕೆ ಇಳಿಯುವ ವಿಶ್ವಾಸದಲ್ಲಿದೆ. 13 ಜನರ ಸಂಭಾವ್ಯರ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಈ ತಂಡದಲ್ಲಿ ಸ್ಪಿನ್ ಬೌಲರ್ಸ್ ಗಳಾದ ಅಶ್ವಿನ್ ಹಾಗೂ ಜಡೇಜಾ ಸ್ಥಾನ ಪಡೆದಿದ್ದಾರೆ. ಅಲ್ಲದೆ ಕನ್ನಡಿಗ ಕೆ.ಎಲ್ ರಾಹುಲ್ ಗೂ ಸ್ಥಾನ ಲಭಿಸಿದೆ.
ಸರಣಿಯಲ್ಲಿ ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಟೀಮ್ ಇಂಡಿಯಾ ಪ್ಲೇಯರ್ಸ್ ಇದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಿರುವ ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನ ಕಾಯ್ದುಕೊಂಡಿದ್ದಾರೆ. ಪೂಜಾರ 2 ಶತಕ ಹಾಗೂ 1 ಅರ್ಧಶತಕದ ಬಲದಿಂದ 328 ರನ್ ಕಲೆ ಹಾಕಿದ್ರೆ, ವಿರಾಟ್ 3 ಪಂದ್ಯಗಳ ಆರು ಇನ್ನಿಂಗ್ಸ್ ಗಳಲ್ಲಿ 259 ರನ್ ಕಲೆ ಹಾಕಿದ್ದಾರೆ. ಉಳಿದಂತೆ ಅಜಿಂಕ್ಯ ರಹಾನೆ 199, ರಿಷಭ್ ಪಂತ್ 191 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲೂ ಟೀಮ್ ಇಂಡಿಯಾ ಕಮಾಲ್ ಪ್ರದರ್ಶನ ನೀಡಿದೆ. ಜಸ್ಪ್ರೀತ್ ಬೂಮ್ರಾ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡ್ತಾ ಇದ್ದು, ಮುರು ಪಂದ್ಯಗಳಿಂದ 20 ವಿಕೆಟ್ ಕಬಳಿಸಿದ್ದಾರೆ. ಇವರನ್ನು ಬಿಟ್ಟರೆ ಭಾರತದ ಪರ ಮೊಹಮ್ಮದ್ ಶಮಿ 14, ಇಶಾಂತ್ ಶರ್ಮಾ 11 ವಿಕೆಟ್ ಉರುಳಿಸಿದ್ದಾರೆ.
ಮೆಲ್ಬೋರ್ನ್ ಟೆಸ್ಟ್ ನ ಸೋಲಿನ ಕಹಿ ಮರೆತು ಭರ್ಜರಿ ಕಮ್ ಬ್ಯಾಕ್ ಮಾಡಲು ಆಸೀಸ್ ಯೋಜನೆ ರೂಪಿಸಿಕೊಂಡಿದೆ. ಆಸೀಸ್ ತಂಡದಲ್ಲೂ ಬದಲಾವಣೆಯ ಗಾಳಿ ಬೀಸಲಿದ್ದು, ಇಬ್ಬರು ಸ್ಪಿನ್ ಬೌಲರ್ಸ್ ಕಣಕ್ಕೆ ಇಳಿಯುವ ಸಂಭವವಿದೆ. ಯಾರು ಟಾಸ್ ಗೆಲ್ಲುತ್ತಾರೆ..? ಯಾರು ಮೊದಲ ದಿನದ ಗೌರವ ತನ್ನದಾಗಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

Leave a Reply

Your email address will not be published.

Social Media Auto Publish Powered By : XYZScripts.com