WATCH : ಕೈಕುಲುಕಿದ ರಿಷಭ್ ಪಂತ್ ಗೆ ಆಸೀ ಪಿಎಂ ಹೇಳಿದ್ದೇನು..? ವೈರಲ್ ಆಯ್ತು ವಿನೋದದ ಕ್ಷಣ..!

ಸಿಡ್ನಿ ಕ್ರಿಕೆಟ್ ಗ್ರೌಂಡ್ (SCG) ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಬಾರ್ಡರ್-ಗವಾಸ್ಕರ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಗುರುವಾರದಿಂದ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನ ಉಭಯ ತಂಡಗಳ ಆಟಗಾರರನ್ನು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರ ಸಿಡ್ನಿ ನಿವಾಸಕ್ಕೆ ಆಹ್ವಾನಿಸಲಾಗಿತ್ತು.

ಈ ವೇಳೆ ಉಭಯ ತಂಡಗಳ ಆಟಗಾರರನ್ನು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಭೇಟಿಯಾದರು. ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಸರತಿಯಲ್ಲಿ ಆಗಮಿಸಿ ಆಸ್ಟ್ರೇಲಿಯಾ ಪಿಎಂ ಅವರನ್ನು ಭೇಟಿಯಾದಾಗ ಅವರು ಗುರುತಿಸಿದ ರೀತಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.

ರಿಷಭ್ ಪಂತ್ ಕೈಕುಲುಕಿದಾದ ಪ್ರಧಾನಿ ಸ್ಕಾಟ್ ಮಾರಿಸನ್ ‘ Ahh yes, You sledges right..? you are very welcome, we like competitive game’ (‘ಯೆಸ್, ನೀನು ಸ್ಲೆಡ್ಜ್ ಮಾಡುತ್ತಿಯಲ್ಲವೇ..? ಯು ಆರ್ ವೇರಿ ವೆಲ್ ಕಮ್, ನಾವು ಕ್ರೀಡೆಯಲ್ಲಿ ಸ್ಪರ್ಧಾತ್ಮಕತೆಯನ್ನು ಇಷ್ಟಪಡುತ್ತೇವೆ’) ಎಂದು ಹೇಳಿ ನಗೆ ಬೀರಿದರು.

ಮೆಲ್ಬರ್ನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ರಿಷಭ್ ಪಂತ್ ಹಾಗೂ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ನಡುವೆ ಮಾತಿನ ಸಮರ ನಡೆದಿತ್ತು.

Leave a Reply

Your email address will not be published.

Social Media Auto Publish Powered By : XYZScripts.com