ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಖುಷಿ ನೀಡುವ ವರ್ಷವಾಗಲಿದೆ 2019 – ಕಾರಣವೇನು..?

2019 ಚಾಲೆಂಜಿಂಗ್ ಸ್ಟಾರ್ ಜತೆ ಅವರ ಅಭಿಮಾನಿಗಳಿಗೂ ಖುಷಿ ನೀಡುವ ವರ್ಷ ಆಗಲಿದೆ. ಇದಕ್ಕೆ ಕಾರಣ ಅವರ ಮೂರು ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ. ಇನ್ನು ದರ್ಶನ್ ನಟನೆಯ ಯಾವ ಸಿನಿಮಾ ಈ ವರ್ಷ ಮೊದಲು ಬರಲಿದೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಮೂರು ಚಿತ್ರಗಳ ಪೈಕಿ ‘ಯಜಮಾನ’ ಮೊದಲು ತೆರೆ ಕಾಣಲಿದೆ.

ಚಿತ್ರತಂಡದ ಪ್ರಕಾರ ಫೆಬ್ರವರಿಯಲ್ಲಿ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದೆ. ಆದರೆ, ಯಾವ ದಿನಾಂಕ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡುತ್ತಿಲ್ಲ.

ನಾಗಣ್ಣ ನಿರ್ದೇಶನದ ‘ಕುರುಕ್ಷೇತ್ರ’ ಚಿತ್ರಕ್ಕೆ ಸಾಕಷ್ಟು ತಾಂತ್ರಿಕ ಕೆಲಸಗಳು ನಡೆಯಬೇಕಿದೆ. ‘ಒಡೆಯ’ ಚಿತ್ರ ಇನ್ನೂ ಶೂಟಿಂಗ್ ಮೈದಾನದಲ್ಲಿದೆ. ‘ಕುರುಕ್ಷೇತ್ರ’ ಚಿತ್ರವನ್ನು ಏಪ್ರಿಲ್ ತಿಂಗಳಲ್ಲಿ ತೆರೆಗೆ ತರುವುದಕ್ಕೆ ನಿರ್ಮಾಪಕ ಮುನಿರತ್ನ ಅವರು ಪ್ಲಾನ್ ಮಾಡಿಕೊಂಡಿದ್ದಾರೆ. ಅದರ ನಂತರ ‘ಒಡೆಯ’ ಸಿನಿಮಾ ತೆರೆಗೆ ಬರಲಿದೆ.

Leave a Reply

Your email address will not be published.

Social Media Auto Publish Powered By : XYZScripts.com