Horse trading : ಬಿಜೆಪಿ ಕುದುರೆ ವ್ಯಾಪಾರದ ಪ್ರೂಫ್ ಇದೆ, ಬಹಿರಂಗ ಮಾಡ್ತೀನಿ: ಸಿದ್ದರಾಮಯ್ಯ

ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಾಮ ಮಾರ್ಗಕ್ಕಿಳಿದಿರುವುದರ ಬಗ್ಗೆ ನಾನು ಮಾಡಿರುವ ಆರೋಪ ಸಾಧಾರ ಎಂದು ಸಿದ್ದರಾಮಯ್ಯ  ಹೇಳಿದ್ದಾರೆ.   ದೋಸ್ತಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ವಾಮ ಮಾರ್ಗ (horse trading) ಅನುಸರಿಸುತ್ತಿದೆ ಎಂಬ ತಮ್ಮ ಮಾತು ಆಧಾರ ರಹಿತ ಅಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಜನತಾ ಪಕ್ಷ ಯಾವ ರೀತಿ ಶಾಸಕರಿಗೆ ಆಮಿಷ ಒಡ್ಡಿತ್ತು ಮತ್ತು ಒಡ್ಡುತ್ತಿದೆ ಎಂಬುದನ್ನು ಆಧಾರವಿಲ್ಲದೆ ನಾನು ಹೇಳಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಾನು ವೃಥಾ ಆರೋಪ ಮಾಡಿಲ್ಲ. ಮಾಡುವುದೂ ಇಲ್ಲ. ಯಾಕೆ ತಮ್ಮತ್ತ ಬರುವಂತೆ ಬಿಸಿ ಪಾಟೀಲರಿಗೆ ಬಿಜೆಪಿ ಆಹ್ವಾನ (ಆಮಿಷ) ನೀಡಿರಲಿಲ್ಲವೇ ಎಂದು ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.

ಬಿಜೆಪಿಯಿಂದ ಶಾಸಕರಿಗೆ ಆಮಿಷ ವಿಚಾರದಲ್ಲಿ ನಾನು ಬಿಜೆಪಿ ಮೇಲೆ ಬ್ಲೇಮ್ ಗೇಮ್ ಮಾಡುತ್ತಿಲ್ಲ. ಆಧಾರ ಇಟ್ಟುಕೊಂಡೇ ಹೇಳಿದ್ದೀನಿ. ಸುಮ್ಮ ಸುಮ್ಮನೇ ನಾನು ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಶಾಸಕ ಬಿ.ಸಿ.ಪಾಟೀಲ್ ಗೆ ಬಿಜೆಪಿಯವರು ತಮ್ಮ ಕಡೆ ಬರುವಂತೆ ಆಫರ್ ಕೊಟ್ಟಿರಲಿಲ್ಲವೇ ಎಂದು ದೋಸ್ತಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಈ ವಾಮ ಕಾರ್ಯಾಚರಣೆಯ ಬಗ್ಗೆ ಎಲ್ಲ ಮಾಹಿತಿ ನನ್ನ ಬಳಿ ಇದೆ. ಸಮಯ ಬರಲಿ, ಇನ್ನೂ ಕೆಲವರಿಂದ ಈ ವಿಚಾರವನ್ನು ಬಹಿರಂಗಪಡಿಸುತ್ತೇನೆ ಎಂದು ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ..

Leave a Reply

Your email address will not be published.

Social Media Auto Publish Powered By : XYZScripts.com