Steel bridge: BJPಯವರನ್ನು ಕೇಳಿಕೊಂಡು ಯೋಜನೆ ಮಾಡಲಾಗದು-DKS…

ಪ್ರತಿಪಕ್ಷವನ್ನು ಕೇಳಿಕೊಂಡು ಅವರು ಒಪ್ಪುವ ಯೋಜನೆಗಳನ್ನೇ ಜಾರಿಗೆ ತರಬೇಕೆಂಬ ನಿಯಮ ಏನೂ ಇಲ್ಲ. ಯೋಜನೆ ರೂಪಿಸುವುದು ಸರಕಾರದ ಕೆಲಸ ಎಂದು ಡಿಕೆಶಿ ಗುಡುಗಿದ್ದಾರೆ.

ಸ್ಟೀಲ್ ಬ್ರಿಜ್ ಯೋಜನೆಗೆ ಮತ್ತೆ ಚಾಲನೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ವಿರುದ್ಧ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹರಿಹಾಯ್ದಿದ್ದಾರೆ. ಈ ಯೋಜನೆಯಲ್ಲಿ ಭ್ರಷಟಾಚಾರದ ವಾಸನೆಯಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಯಾಗಿ ಬಿಜೆಪಿಯವರೇನು ಸತ್ಯ ಹರಿಶ್ಚಂದ್ರನ ಮಕ್ಕಳಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಜನರಿಗೆ ಬೇಡವಾದ ಯೋಜನೆ ಜಾರಿಗೆ ತರುವ ಹಠ ಸರಕಾರಕ್ಕೆ ಏಕೆ. ಖುದ್ದು ಕುಮಾರಸ್ವಾಮಿ ಅವರೇ ಈ ಯೋಜನೆ ವಿರೋಧಿಸಿದ್ದನ್ನು ಮರೆತಿದ್ದಾರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರಶ್ನಿಸಿದ್ದರು.

ಖುದ್ದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಪರಮೇಶ್ವರ ಅವರು ಯೋಜನೆಗೆ ಮರುಜೀವ ನೀಡುವ ಮಾತನ್ನಾಡಿದ್ದಾರೆ.

ಈ ಯೋಜನೆ ಸಾರ್ವಜನಿಕ ಸಹಭಾಗಿತ್ವದಲ್ಲಿ ನಡೆಯಲಿದ್ದು, ವಿಸ್ತೃತ ವರದಿಯನ್ನು ಸಾರ್ವಜನಿಕರ ಮುಂದೆ ಇಡಲಿದ್ದೇವೆ. ಅವರ ತೀರ್ಮಾನವೇ ಅಂತಿಮವಾಗಲಿದೆ ಎಂದು ಅವರು ತಿಳಿಸಿದರು.

ಹೆಬ್ಬಾಳದ ಎಸ್ಟಿಂ ಮಾಲ್‍ನಿಂದ ಚಾಲುಕ್ಯ ವೃತ್ತದವರೆಗೆ ಉಕ್ಕಿನ ಸೇತುವೆ ನಿಮಾಣ ಮಾಡುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು

ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆರೋಪಿಸಿ ಪರಿಸರವಾದಿಗಳು ಹಸಿರು ನ್ಯಾಯಾಧಿಕರಣದ ಮೊರೆ ಹೋಗಿದ್ದರು.

Leave a Reply

Your email address will not be published.