ಸಾಂಸ್ಕೃತಿಕ ನಗರಿಯ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ಲಗ್ಗೆ : ಚಾಮುಂಡಿಬೆಟ್ಟದಲ್ಲಿ ಜನ ಸಾಗರ

ಸಾಂಸ್ಕೃತಿಕ ನಗರಿ ಮೈಸೂರು ಸುತ್ತ ಮುತ್ತಲ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಇಂದು ಹೊಸವರ್ಷದ ಸಂಭ್ರಮಾಚರಣೆ ಹಿನ್ನೆಲೆ ಲಗ್ಗೆ ಇಡುತ್ತಿದ್ದಾರೆ.

ಪ್ರವಾಸಿಗರು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಭಕ್ತರಸಾಗರವೇ ಹರಿದು ಬರುತ್ತಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಹೊಸವರ್ಷ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಹಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿದ್ದಾರೆ.

ಬೆಳಗ್ಗೆಯಿಂದಲೆ ತಂಡೋಪತಂಡವಾಗಿ ಸಾವಿರಾರು ಭಕ್ತರು ಆಗಮಿಸಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಟ್ರಾಫಿಕ್ ಕಿರಿಕಿರಿ ಉಂಟಾಗಿದೆ.

ಅರಮನೆಯ ಟಿಕೆಟ್ ಕೌಂಟರ್ ನಲ್ಲಿ ಜನಸಾಗರ ತುಂಬಿದೆ. ನೂತನ ವರ್ಷದ ಮಜಾ ಅನುಭವಿಸಲು ಪ್ರವಾಸಿಗರು ಮೈಸೂರಿನತ್ತ ಮುಖ ಮಾಡಿದ್ದು, ಕುಟುಂಬ ಸಮೇತರಾಗಿ ಅಂಬಾವಿಲಾಸ ಅರಮನೆಗೆ ಭೇಟಿ ನೀಡುತ್ತಿದ್ದಾರೆ. ಅರಮನೆಗೆ ಆಗಮಿಸಿರುವ ಪ್ರವಾಸಿಗರ ಪೈಕಿ ಬಹುತೇಕ ಹೊರ ರಾಜ್ಯ ಹಾಗೂ ವಿದೇಶಿಗರೇ  ಹೆಚ್ಚಾಗಿದ್ದಾರೆ.

ಅರಮನೆ  ಭೇಟಿ ನೀಡುವವರ ಜೊತೆಗೆ ಕಾರಂಜಿ ಕೆರೆ, ಮೃಗಾಲಯ ಸೇರಿ ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳತ್ತ ಧಾವಿಸುತ್ತಿದ್ದಾರೆ. ಡಿಸೆಂಬರ್ ಹಾಗೂ ಜನವರಿ ತಿಂಗಳುಗಳು ಶಾಲಾ ಪ್ರವಾಸ ತಿಂಗಳು ಗಳಾಗಿರುವ ಕಾರಣ ತಂಡೋಪ ತಂಡವಾಗಿ ಶಾಲಾ ಮಕ್ಕಳು ಆಗಮಿಸಿ ಅರಮನೆ ವೀಕ್ಷಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com