ವಿಷ ಪ್ರಸಾದ ಪ್ರಕರಣ : 15 ಜನ ಅಸ್ವಸ್ಥರಿಗೆ ಮುಂದುವರೆದ ಚಿಕಿತ್ಸೆ – ಓರ್ವನ ಸ್ಥಿತಿ ಗಂಭೀರ

ಚಾಮರಾಜನಗರದ ಸುಳ್ವಾಡಿ ಗ್ರಾಮದಲ್ಲಿನ ಮಾರಮ್ಮನ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 103 ಜನ ಅಸ್ವಸ್ಥರಾಗಿ, 16 ಜನ ಸಾವನ್ನಪ್ಪಿದ್ದ ವಿಚಾರ ತಮಗೆಲ್ಲಾ ತಿಳಿದೇ ಇದೆ. ಆದರೆ ವಿಷ ಪ್ರಸಾದ ದುರಂತ ನಡೆದು ಸರಿಸುಮಾರು 15 ದಿನಗಳು ಕಳೆದು ಹೊಸ ವರ್ಷಕ್ಕೆ ಕಾಲಿಟ್ಟರೂ ವಿಷ ಪ್ರಸಾದದ ಎಫೆಕ್ಟ್ ಕಡಿಮೆಯಾಗಿಲ್ಲ.

ಹೌದು.. ವಿಷ ಪ್ರಸಾದ ಸೇವಿಸಿದವರ ಪೈಕಿ ಕೆಲವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಇನ್ನೂ ಕೆಲ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ 7 ಖಾಸಗಿ ಆಸ್ಪತ್ರೆಗಳಲ್ಲಿ 15 ಜನ ಅಸ್ವಸ್ಥರಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ 11 ಅಸ್ವಸ್ಥರಿಗೆ ಸಾಮಾನ್ಯ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗಿದ್ರೆ, ಮೂವರು ಅಸ್ವಸ್ಥರಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೋ ಓರ್ವನ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈಗಾಗಲೇ 16 ಜನರನ್ನ ಕಳೆದುಕೊಂಡ ಸುಳ್ವಾಡಿ ಗ್ರಾಮ ಕಣ್ಣೀರಿನಿಂದಾಚೆ ಹೊರಬಂದಿಲ್ಲ. ಅದಾಗಲೇ ಮತ್ತೋರ್ವರ ಸ್ಥಿತಿ ಗಂಭೀರದ ವಿಚಾರ ತಿಳಿಸಿದೆ. ರೊಚ್ಚಿಗೆದ್ದ ಜನ ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕು. ಅವರ ಪರ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸೆರೆಮನೆ ವಾಸದಲ್ಲಿರುವ ಆರೋಪಿಗಳು ಜಾಮೀನು ಪಡೆಯಲು ತಮ್ಮ ಪರ ವಕಾಲತ್ತಿಗಾಗಿ ಸಂಚು ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿರುವುದರಿಂದ ಆರೋಪಿಗಳಿಗೆ ಶಿಕ್ಷೆ ಅಥವಾ ಮುಂದಿನ ಕ್ರಮ ಕೈಗೊಳ್ಳಲು ಕೂಡ ಸಾಧ್ಯವಾಗದೆ ಕೋರ್ಟ್ ಆರೋಪಿಗಳು ಸೆರೆಮನೆವಾಸದಲ್ಲಿರಲು ಸೂಚಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com