ದಂಡ ವಸೂಲಿ ಮಾಡುವ ಕೈಗಳಲ್ಲಿ ‘ನ್ಯೂ ಇಯರ್ ಗಿಫ್ಟ್’ : ಸಂಚಾರಿ ಪೊಲೀಸರಿಂದ ವಿಶೇಷ ಹೊಸವರ್ಷಾಚರಣೆ…

ಸಂಚಾರಿ ನಿಯಮಗಳನ್ನ ಪಾಲಿಸದವರಿಗೆ ದಂಡ ವಸೂಲಿ ಮಾಡುತ್ತದ್ದ ಕೈಗಳಲ್ಲಿ ಇಂದು ಗಿಫ್ಟ್ ಪ್ಯಾಕೇಟ್ ಗಳು ಕಂಡು ಸಂಚಾರಕರು ಬೆರಗಾದರು. ನಿಯಮ ಪಾಲಿಸುವವರನ್ನ ಉತ್ತೇಜಿಸಲು ಸಂಚಾರಿ ಪೊಲೀಸರು ಪ್ರಯಾಣಿಕರಿಗೆ ಗಿಫ್ಟ್ ಕೊಟ್ಟು ವಿನೂತನ ಹೊಸವರ್ಷಾಚರಣೆಯನ್ನು ಮಾಡಿದರು.

ಹೌದು.. ಸಂಚಾರಿ ನಿಯಮ ಪಾಲಿಸುವವರಿಗೆ ನ್ಯೂಇಯರ್ ಗಿಫ್ಟ್ ನೀಡುವ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ಸಂಚಾರ ಠಾಣಾ ಪೊಲೀಸರು ವಿನೂತನವಾಗಿ ಹೊಸವರ್ಷಾಚರಣೆ ಮಾಡಿದ್ದಾರೆ.

ನಿಯಮ ಪಾಲಿಸುವ  ವಾಹನ ಸವಾರರಿಗೆ  ಗ್ರೀಟಿಂಗ್  ಕಾರ್ಡ್, ನೆನಪಿನ  ಕಾಣಿಕೆ ಹಾಗೂ  ಲಾಡು  ವಿತರಣೆ ಮಾಡುವ ಮುಖಾಂತರ ಮೈಸೂರು ಸಂಚಾರ ಪೊಲೀಸರು ನ್ಯೂ ಇಯರ್ ಆಚರಿಸಿದ್ದಾರೆ. ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಬಳಿ ನಡೆದ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರ ರಾವ್  ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ ಡಾ.ವಿಕ್ರಂ ಅಮಟೆ ಚಾಲನೆ ನೀಡಿದರು.

ನಗರದ ಐದು  ಸಂಚಾರಿ ಪೊಲೀಸ್ ಸ್ಟೇಷನ್ ಗಳ ವ್ಯಾಪ್ತಿಯಲ್ಲಿ ಸಿಹಿ ಹಾಗೂ ಗಿಫ್ಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಟ್ರಾಫಿಕ್ ಪೊಲೀಸರು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ- ನಗರಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರ ರಾವ್ ಸ್ಪಷ್ಟನೆ…

ಹೊಸವರ್ಷವನ್ನು ಮೈಸೂರಿಗರು ಶಾಂತಿಯುತವಾಗಿ  ಆಚರಿಸಿದ್ದಾರೆ. ರಾತ್ರಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಮಣ್ಯೇಶ್ವರ ರಾವ್ ಸ್ಪಷ್ಟನೆ ನೀಡಿದರು.

ಎಲ್ಲಿಯೂ ಯಾವುದೇ ಸಣ್ಣ ದುರ್ಘಟನೆಗಳು ನಡೆದಿಲ್ಲ. ಹೊಸ  ವರ್ಷದ ಸಂಭ್ರಮವನ್ನ  ಮೈಸೂರಿಗರು ಸುರಕ್ಷಿತವಾಗಿ ಆಚರಿಸಿದ್ದಾರೆ . ಮೈಸೂರಿನಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. 2019,ರ ವರ್ಷವೂ ಸುರಕ್ಷಿತ ಮೈಸೂರು ನಿರ್ಮಾಣ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com