ಭಾರತದ ಸ್ಮೃತಿ ಮಂದಾನಗೆ ಸಂದ ‘ವರ್ಷದ ಕ್ರಿಕೆಟ್ ಆಟಗಾರ್ತಿ’ ಗೌರವ

ಭಾರತದ ಸ್ಮೃತಿ ಮಂದಾನ ಅವರಿಗೆ ಈ ವರ್ಷದ ಐಸಿಸಿ ‘ ವರ್ಷದ ಕ್ರಿಕೆಟ್ ಆಟಗಾರ್ತಿ’  ಗೌರವ ಸಂದಿದೆ. ವರ್ಷದ ಏಕದಿನ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಯೂ ಅವರ ಪಾಲಾಗಿದೆ.

ಈ ವರ್ಷ ಭಾಗವಹಿಸಿದ್ದ  12 ಏಕದಿನ ಪಂದ್ಯಗಳಲ್ಲಿ 669 ರನ್ ಗಳಿಸಿದ ಮಂದಾನ,  25 ಟ್ವೆಂಟಿ–20 ಪಂದ್ಯಗಳಲ್ಲಿ 622 ರನ್‌ ಗಳಿಸಿದ್ದರು.  22 ವರ್ಷದ ಅವರು, ವರ್ಷದ ಕ್ರಿಕೆಟರ್ ಪ್ರಶಸ್ತಿಗೆ ಅರ್ಹರಾದ ಭಾರತದ ಎರಡನೇ ಆಟಗಾರ್ತಿ. 2007ರಲ್ಲಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಈ ಗೌರವಕ್ಕೆ ಪಾತ್ರರಾಗಿದ್ದರು.

ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ವುಮನ್ ಅಲಿಸಾ ಹೀಲಿ, ವರ್ಷದ ಟ್ವೆಂಟಿ–20 ಆಟಗಾರ್ತಿ ಎನಿಸಿಕೊಂಡಿದ್ದಾರೆ. ಆರು ಪಂದ್ಯಗಳಲ್ಲಿ ಅವರು 225 ರನ್‌ ಗಳಿಸಿದ್ದಾರೆ. ಇಂಗ್ಲೆಂಡ್‌ನ ಯುವ ಆಟಗಾರ್ತಿ ಸೋಫಿ ಎಕ್ಲಸ್ಟೋನ್‌, ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com