ಕ್ರಿಕೆಟ್ ಆಸ್ಟ್ರೇಲಿಯಾದ ‘ವರ್ಷದ ಏಕದಿನ ತಂಡ’ಕ್ಕೆ ಕೊಹ್ಲಿ ನಾಯಕ – ಭಾರತದ 4 ಆಟಗಾರರಿಗೆ ಸ್ಥಾನ

ಕ್ರಿಕೆಟ್ ಆಸ್ಟ್ರೇಲಿಯಾ 2018ನೇ ಸಾಲಿನ ವರ್ಷದ ಏಕದಿನ ತಂಡವನ್ನು ಪ್ರಕಟಿಸಿದ್ದು, ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ನಾಯಕನನ್ನಾಗಿ ನೇಮಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ವರ್ಷದ ಏಕದಿನ ತಂಡದಲ್ಲಿ ತಂಡದಲ್ಲಿ ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಭಾರತದ ನಾಲ್ವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ.

ಆರಂಭಿಕ ಆಟಗಾರನಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಸ್ಪಿನ್ನರ್ ಕುಲದೀಪ್ ಯಾದವ್ ಹಾಗೂ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ.

ತಂಡ ಇಂತಿದೆ : ರೋಹಿತ್ ಶರ್ಮಾ, ಶಿಮ್ರಾನ್ ಹೆಟ್ಮಾಯರ್, ವಿರಾಟ್ ಕೊಹ್ಲಿ (ನಾಯಕ), ಜೋ ರೂಟ್, ಜಾನಿ ಬೇರ್ಸ್ಟೊ, ಜೋಸ್ ಬಟ್ಲರ್, ತಿಸಾರಾ ಪೆರೆರಾ, ರಾಶಿದ್ ಖಾನ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮುಸ್ತಫಿಜುರ್ ರೆಹಮಾನ್.

 

Leave a Reply

Your email address will not be published.

Social Media Auto Publish Powered By : XYZScripts.com