ಸರ್ಕಾರಿ ಶಾಲೆಯ ಅಡುಗೆ ಮನೆಯಲ್ಲಿ ಕುಕ್ಕರ್ ಬ್ಲಾಸ್ಟ್ : ಸುಟ್ಟ ಗಾಯಗಳಿಂದ ನರಳುತ್ತಿರುವ ವಿದ್ಯಾರ್ಥಿನಿ

ಮಂಡ್ಯಾದ ಸರ್ಕಾರಿ ಶಾಲೆಯ ಅಡುಗೆ ಮನೆಯಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ 9 ವರ್ಷದ 4 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಗಾಯಗಳಾದ ಘಟನೆ ನಡೆದಿದೆ. ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತಿದ್ದ ವೇಳೆ ಕುಕ್ಕರ್ ಸಿಡಿದು ಈ ದುರಂತ ಸಂಭವಿಸಿದೆ.

ಪ್ರತಿನಿತ್ಯ ಬಿಸಿಯೂಟ ಮಾಡುವಾಗ ಶಿಕ್ಷಕರು ಸಹಾಯಕಿ ಎಂದು ಸಿಂಚನಾಳನ್ನ ಅಡುಗೆ ಮನೆಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ. ಸಹಾಯಕ್ಕೆಂದು ಸಿಂಚನಾ ಹೋದಾಗ ಕುಕ್ಕರ್ ಸಿಡಿದು ಕುಕ್ಕರ್ ನಲ್ಲಿದ್ದ ಬಿಸಿ ನೀರು ವಿದ್ಯಾರ್ಥಿ ಮೈ ಮೇಲೆ ಸಿಡಿದ ಪರಿಣಾಮ ಸಾಕಷ್ಟು ಸುಟ್ಟು ಗಾಯಗಳಾಗಿವೆ. ಗಾಯಗಳಿಂದ ನರಳುತ್ತಿರುವ ವಿದ್ಯಾರ್ಥಿನಿ ಸಿಂಚನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುವಾಗ ವಿದ್ಯಾರ್ಥಿಗಳನ್ನು ಅಡುಗೆ ಮನೆಗೆ ಸೇರಿಸುವ ಹಾಗಿಲ್ಲ. ಈ ವಿಚಾರ ತಿಳಿದು ಶಿಕ್ಷಕರು ಹಾಗೂ ಅಡುಗೆ ಬಾಣಸಿಗರು ಅಡುಗೆ ಮನೆಗೆ ವಿದ್ಯಾರ್ಥಿಯನ್ನು ಕಳುಹಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನೊಂದ ಪೋಷಕರು ಆಗ್ರಹಿಸಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com