Bigg Boss 6 : ಬಿಗ್ ಬಾಸ್ ಹೇಳಿದ ಕಥೆ ಸ್ಪರ್ಧಿಗಳ ಬಾಯಲ್ಲಿ ಪುಳಿಯೋಗರೆ – ಚಿತ್ರನ್ನ..

ಬಾಲ್ಯವನ್ನು ನೆನಪು ಮಾಡಿದ ಬಿಗ್ ಬಾಸ್ ಕಥೆ.  ಬಾಯಿಂದ ಬಾಯಿಗೆ ಒಂದು ವಿಚಾರ ಹೇಗೆ ತಿರುವು ಪಡೆದುಕೊಳ್ಳುತ್ತದೆ ಅನ್ನೋದನ್ನ ತಿಳಿಸಲು ಶಿಕ್ಷಕರು ಮಕ್ಕಳ ಕಿವಿಯಲ್ಲಿ ಗುಟ್ಟು ಹೇಳುತ್ತಾರೆ. ಆ ಗುಟ್ಟು ಕೊನೆಯ ವಿದ್ಯಾರ್ಥಿಗೆ ತಲುಪುವ ಹೊತ್ತಿಗೆ ಏನಾಗಿರುತ್ತದೆ ಅನ್ನೋದೇ ಈ ಆಟದ ತಿರುಳು. ಇಂಥದೊಂದು ಆಟವನ್ನ ಬಿಗ್ ಬಾಸ್ ಮನೆಯಲ್ಲೂ ಆಡಿಸಲಾಯಿತು.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದು ಕಥೆಯನ್ನು ಹೇಳುತ್ತಾರೆ. ಆ ಕಥೆಯನ್ನಲ್ಲಿದ್ದ ರಾಜನನ್ನೇ ಸಾಯಿಸಿ ಬಿಡ್ತಾನೆ ಕೊನೆಗೆ ಗುಟ್ಟು ಕೇಳಿದ ಆ್ಯಂಡಿ. ಜೊತೆಗೆ ಸಮುದ್ರದಲ್ಲಿ ಹುಟ್ಟದ ಕಮಲವನ್ನು ಹುಟ್ಟಿಸಿ ರಾಣಿ ಬದಲು ರಾಜ ಸತ್ತೋದ ಎನ್ನುವ ಕಥೆ ಹೇಳುತ್ತಾರೆ ಸ್ಪರ್ಧಿಗಳು.

ಡ್ರಾಗನ್ ಪೂರ್ವ ಕುಮಾರಿಯನ್ನು ಎತ್ತಿಕೊಂಡು ಹೋಗುತ್ತದೆ. ಪೂರ್ವ ಕುಮಾರಿಯನ್ನು ಕಾಪಾಡಲು ಸಹೋದರಿಯರು ಹೋಗುತ್ತಾರೆ. ಕೊನೆಗೆ ಡ್ರಾಗನ್ ಬಿಗ್ ಬಾಸ್ ಮನೆಯಲ್ಲಿರುತ್ತದೆ ಎಂದು ಅರ್ಧ ಕಥೆಯನ್ನು ಹೇಳಿ. ಕಥೆಯನ್ನೇ ಬದಲಾಯಿಸಿಬಿಡ್ತಾರೆ. ಕೊಂಚ ಮಟ್ಟಗೆ ಕಥೆ ಸರಿಯಾಗೇ ಇದ್ದರೂ ಒಬ್ಬರಿಂದ ಒಬ್ಬರಿಗೆ ಕಥೆ ವರ್ಗಾವಣೆಗೊಳ್ಳುವ ಸಮಯದಲ್ಲಿ ಬಿಗ್ ಬಾಸ್ ನೋಡುಗರು ಸಕತ್ ಎಂಜಾಯ್ ಮಾಡಿದಂತು ಸುಳ್ಳಲ್ಲ.

 

 

 

Leave a Reply

Your email address will not be published.

Social Media Auto Publish Powered By : XYZScripts.com