Bigg Boss 6 : ಮೂರು ಜನ ಹುಡುಗೀಯರಿಂದ ಮನೆಗೆ ಹೊಸ ಕಳೆ – ಚೇಂಜ್ ಆದ್ರಾ ಆ್ಯಂಡಿ ಮತ್ತು ರಾಕೇಶ್..?

ಬಿಗ್ ಬಾಸ್ ಮನೆಗೆ ಮೂರು ಜನ ಹುಡುಗೀರು ಬಂದ ದಿನ ಪುರುಷ ಸ್ಪರ್ಧಿಗಳ ಮುಖದಲ್ಲಿ ಬೇರೆ ಕಳೆಯೇ ಸೃಷ್ಠಿಯಾಗಿದೆ. ಎರೆಡುವರೆ ವಾರದಲ್ಲಿ ಅದೆಷ್ಟು ಬದಲಾವಣೆಯಾಗಿದೆ ಅಂದರೆ ಪುರುಷರು ತಾವು ತುಂಬಾ ಇಷ್ಟಪಡುತ್ತಿದ್ದ ಮತ್ತು ಹೆಚ್ಚು ಕಾಲ ಕಳೆಯುತ್ತಿದ್ದ ಹಾಗೂ ಪ್ರೀತಿಸುತ್ತಿದ್ದವರನ್ನ ಮರೆಸುವಷ್ಟು.

ಹೌದು.. ಬಿಗ್ ಬಾಸ್ ಮನೆಯ ಆ್ಯಂಡಿಗೆ ಕವಿತಾಳ ಮೇಲೆ ಲವ್ ಶುರುವಾಗಿತ್ತು. ಅದು ಕಾಲ ಕಳೆದಂತೆ ಬ್ರೇಕ್ ಆದರೂ ಕೂಡ ಆ್ಯಂಡಿಗೆ ಕವಿತಾಳನ್ನು ಕಂಡರೆ ಅದೆನೋ ಒಲವು. ಅವಳೊಂದಿಗೆ ಮಾತನಾಡಬೇಕು, ಅವಳನ್ನ ನೋಡಬೇಕು, ಅವಳ ಪರವಾಗಿ ಆಡಬೇಕು, ಅವಳನ್ನು ಗೆಲ್ಲಿಸಬೇಕು, ಅವಳ ಮನ ಒಲಿಸಬೇಕು ಅನ್ನೋ ಪ್ರಯತ್ನಗಳು ನಡಿತಾನೇ ಇತ್ತು. ಆದರೆ ಯಾವಾಗ ಬಿಗ್ ಬಾಸ್ ಮನೆಗೆ ವೈಲ್ ಕಾರ್ಡ್ ಕಂಟೆಸ್ಟೆಂಟ್ ಆಗಿ ಮೂರು ಜನ ಹುಡುಗೀಯರ ಎಂಟ್ರಿ ಆಯ್ತೋ ಆ್ಯಂಡಿ ಬದಲಾಗಿ ಹೋದರು.

ಆ್ಯಂಡಿ ಬದಲಾಗಿ ಹೋದರು ಅನ್ನೋದಕ್ಕೆ ಬೆಸ್ಟ್ ಸಿಚ್ಯುವೇಷನ್ ಅಂದರೆ ಮೊನ್ನೆಯಷ್ಟೇ ನಿವೇದಿತಾ ಗೌಡ ಎಲಿಮಿನೇಟ್ ಆಗಿ ಮನೆಯಿಂದ ಹೊರಹೋದಾಗ ಆ್ಯಂಡಿ ದು:ಖಿಸಿ ಕಣ್ಣೀರಾಗಿದ್ರು. ಕಣ್ಣೀರು ಹಾಕುವ ವೇಳೆ ‘ಅದ್ಯಾಕ್ರು ನಮ್ ಲೈಫ್ ಬರ್ತಾರೋ..? ಅದ್ಯಾಕದ್ರು ಹೋಗ್ತಾರೋ..? ಕಂಟೆಸ್ಟೆಂಟ್ ಆಗಿ ನಿವೇದಿತ ಬಂದ್ಲು ಕಂಟೆಸ್ಟೆಂಟ್ ಆಗೇ ಹೋದ್ಲು’ ಅಂತ ಕಣ್ಣೀರಿಟ್ಟರು. ಈ ಹಿಂದೆ ಮನೆಯ ಯಾವ ಸದಸ್ಯರೂ ಹೋದಗಲೂ ಇಷ್ಟೊಂದು ಬೇಸರ ಆ್ಯಂಡಿ ಮಾಡಿಕೊಂಡಿರಲಿಲ್ಲ. ಹೀಗಾಗಿ ಆ್ಯಂಡಿ ಬದಲಾಗಿ ಹೋದರು ಅನ್ನೋದು ಇಲ್ಲಿ ಸತ್ಯ.

ಇನ್ನೂ ಬಿಗ್ ಬಾಸ್ ಮನೆಯ ಬೆಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡು ಅನುಮಾನಾಸ್ಪದವಾಗಿ ನಡೆದುಕೊಳ್ಳುತ್ತಿದ್ದ ಅಕ್ಷ ಮತ್ತು ರಾಕಿ ಸ್ಟೋರಿನೇ ಈಗ ಡಿಫ್ರೆಂಟಾಗಿ ಹೋಗಿದೆ. ಮೂರು ಜನ ಹುಡುಗೀಯರು ಬಂದ ಮೇಲೆ ರಾಕಿ ನಡವಳಿಕೆಯೇ ಚೇಂಜ್ ಆಗಿದೆ. ನಿವೇದಿತಾ, ಜೀವಿತಾ, ಮೇಘನ ಅವರೊಂದಿಗೆ ರಾಕೇಶ್ ಮಾತನಾಡುತ್ತಿದ್ದರೆ ಸಾಕು ಅಕ್ಷತಾ ಹೊಟ್ಟೆಕಿಚ್ಚು ಪಡುತಿದ್ದಾಳೆ ಅನ್ನೋದನ್ನ ಮನೆಯ ಸದಸ್ಯರು ಮಾತ್ರವಲ್ಲದೇ ರಾಕೇಶ್ ಕೂಡ ಹೇಳಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಅಂದರೆ ರಾಕಿ ಜೀವಿತಾ ಅಥವಾ ನಿವೇದಿತ ಅವರೊಂದಿಗೆ ಮಾತನಾಡುತ್ತಿರುವಾಗ ಮಧ್ಯದಲ್ಲಿ ಬಂದು ಅಕ್ಷತಾ ಏನಾದ್ರು ಮಾತನಾಡುವುದು, ರಾಕಿಯನ್ನು ಕರೆಯುವುದು, ಹೊಸದಾಗಿ ಬಂದ ಹುಡುಗಿಯರ ವಿರುದ್ಧ ಗುಸುಗುಸು ಮಾತನಾಡುವುದು ಇದೆಲ್ಲಾ ನಡೆದಿದೆ.

ಇದನ್ನೆಲ್ಲಾ ಅರಿತಾ ಮನೆಯ ಸದಸ್ಯರು ಅಕ್ಷತಾಗೆ ರಾಕಿ ಬೇರೆ ಹುಡುಗೀಯರ ಜೊತೆ ಮಾತನಾಡುವುದು ಇಷ್ಟ ಇಲ್ಲ ಎಂದು ನೇರವಾಗಿಯೇ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನೂ ಅಕ್ಷತಾಳಿಗೆ ಸದ್ಯ ತಾನು ಮಾಡಿತ ತಪ್ಪಿನ ಅರಿವು ಆಗುತ್ತಿದೆ ಅನ್ನಿಸುತ್ತಿದೆ. ಮನೆಯ ಅತೀ ಹೆಚ್ಚು ಸಮಯವನ್ನು ರಾಕೇಶ್ ನೊಂದಿಗೆ ಕಳೆದು ಇನ್ನುಳಿದ ಸದಸ್ಯರಿಂದ ದೂರವಿದ್ದು, ತಮ್ಮ ಹೆಸರನ್ನೂ ಹಾಳು ಮಾಡಿಕೊಂಡಿರುವ ಅರಿವು ಅವರಿಗಾಗುತ್ತಿದೆ ಅನ್ಸುತ್ತೆ. ಒಂದುಕಡೆ ರಾಕೇಶ್ ನೊಂದಿಗೆ ಸಮಯ ಕಳೆಯಲು ರಾಕೇಶ್ ಬ್ಯೂಸಿ, ಇನ್ನೋಂದು ಕಡೆ ಮನೆಯ ಸದಸ್ಯರೊಂದಿಗೆ ಬೆರೆಯಲು ಆಗದೆ ಒಂಟಿಯಾಗಿದ್ದಾರೆ ಅಕ್ಷತಾ.

Leave a Reply

Your email address will not be published.