ಸುಲ್ವಾಡಿ ವಿಷಪ್ರಸಾದ ಪ್ರಕರಣ : ‘ಆರೋಪಿಗಳ ಪರ ವಕಾಲತ್ತು ಬೇಡಿ’ ಎಂದು ಪ್ರತಿಭಟನೆ…

ಚಾಮರಾಜನಗರದ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದಲ್ಲಿ ವಿಷಪ್ರಸಾದ ಸೇವಿಸಿ 16 ಜನ ಭಕ್ತರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಕೀಲರು ವಕಾಲತ್ತು ವಹಿಸಬಾರದು ಎಂದು ಆಗ್ರಹಿಸಿ ಮೈಸೂರು ಕನ್ನಡ ವೇದಿಕೆ ಪ್ರತಿಭಟನೆ ನಡೆಸಿತು.

ಈಗಾಗಲೇ ಚಾಮರಾಜನಗರ-ಮೈಸೂರು ವಕೀಲರು ವಕಾಲತ್ತು ವಹಿಸದಂತೆ ನಿರ್ಧರಿಸಿದ್ದಾರೆ…ಇದು ಸ್ವಾಗತಾರ್ಹ. ಇದೀಗ ಹೊರಗಿನ ವಕೀಲರು ‌ಆರೋಪಿಗಳ ಪರ ವಕಾಲತ್ತು ವಹಿಸಲು ಮುಂದಾಗಿದ್ದಾರೆ. ಆರೋಪಿಗಳಿಗೆ ಜಾಮೀನು ಕೊಡಿಸುವ ಪ್ರಯತ್ನ ಮಾಡಬಾರದು.

ನೀಚ ಕೃತ್ಯ ಮಾಡಿದವರ ಪರ ವಕಾಲತ್ತು ವಹಿಸದೆ ಪಾಠ ಕಲಿಸಬೇಕೆಂದು ಆಗ್ರಹಿಸಿ ಮೈಸೂರಿನ ನ್ಯಾಯಾಲಯದ ಬಳಿ ಜಮಾಯಿಸಿದ  ಮೈಸೂರು ಕನ್ನಡ ವೇದಿಕೆಯ ಸದಸ್ಯರು ಪ್ರತಿಭಟನೆ ನಡೆಸಿದರು.

ಪ್ರಕರಣ ಸಂಬಂಧ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಮ್ಯಾನೇಜರ್ ಮಾದೇಶ. ಆತನ ಪತ್ನಿ ಅಂಬಿಕಾ ಈಗಾಗಲೇ ಜೈಲು ಸೇರಿದ್ದು ಇವರು ಮಾಡಿರುವ ಕೃತ್ಯವನ್ನ ಖಂಡಿಸಿ ಅವರ ಪರ ಯಾರು ವಕಾಲತ್ತು ವಹಿಸಬಾರದೆಂಬ ಆಗ್ರಹ ಕೇಳಿ ಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com