ಮಾನಸಿಕ ಅಸ್ವಸ್ಥನ ಸೇವೆ : ಪೊಲೀಸ್ ಇಲಾಖೆಯ ರಿಯಲ್ ಹೀರೊ ಮಧುಕರ್ ಶೆಟ್ಟಿ

ಡಿಎಆರ್ ಆವರಣದಲ್ಲಿ ಎಸ್ಪಿ ಮಧುಕರ್ ಶೆಟ್ಟಿ ಸಾಹೇಬರ ಸಮ್ಮುಖದಲ್ಲಿ ಸಿಬ್ಬಂದಿಗಳು ಮಾನಸಿಕ ಅಸ್ವಸ್ಥನಿಗೆ ಸ್ನಾನ ಮಾಡಿಸುತ್ತಿರುವ ಚಿತ್ರ ನೋಡುಗರ ಮನಮಿಡಿಯುವಂತಿದ್ದು, ಸದ್ಯ ಆ ಚಿತ್ರಗಳು ವೈರಲ್ ಆಗಿದೆ. ಈ ಫೋಟೋ ತೆಗೆದ ಫೋಟೋ ಗ್ರಾಫರ್ ಎ.ಎನ್.ಪ್ರಸನ್ನ ಅಂದಿನ ಸಿಹಿ ಘಟನೆಗಳನ್ನ ಹಂಚಿಕೊಂಡಿದ್ದಾರೆ.

’13 ವರ್ಷದ ಹಿಂದೆ ಬೆಳಗ್ಗೆ 6ಕ್ಕೆ ಕ್ಯಾಮೆರಾ ಹಾಕ್ಕೊಂಡು ಕೆಲಸ ಮಡುತ್ತಿದ್ದ, ಪತ್ರಿಕೆಗಾಗಿ ಹಕ್ಕಿ ಫೋಟೊ ತೆಗೆಯೋದಕ್ಕೆ ಹೊರಟಾಗ, ನಗರದ ಐಜಿ ರಸ್ತೆಯಲ್ಲಿ ಮಾನಸಿಕ ಅಸ್ವಸ್ಥರನ್ನು ಪೊಲೀಸರು ಜೀಪ್ ನಲ್ಲಿ ಕರೆದೊಯ್ಯುತ್ತಿದ್ದರು. ವಾಹನ ನಿಲ್ಲಿಸಿ ಏನು ಅಂತ ಪೊಲೀಸ್ ನವರಿಗೆ ಕೇಳಿದಾಗ ನಗರದಲ್ಲಿರುವ ಮಾನಸಿಕ ಅಸ್ವಸ್ಥರನ್ನು ಎತ್ತಾಕ್ಕೊಂಡು ಬಂದು ಸ್ವಚ್ಚತೆ ಮಾಡಿ ಊಟ ಕೊಡಿಸಿ ಆಶ್ರಮಕ್ಕೆ ಬಿಡಿ ಎಂದು ಮಧುಕರ್ ಶೆಟ್ಟಿ ಸಾಹೆಬ್ರು ಹೇಳಿದ್ದಾರೆ ಸಾರ್ ಎಂದ್ರು. ಆಗ ನನಗೆ ಕುತುಹಲ ಉಂಟಾಗಿ ಹಕ್ಕಿಚಿತ್ರ ತೆಗೆಯುವ ಪ್ರಯಾಣಕ್ಕೆ ಬ್ರೇಕ್ ಹಾಕಿ ಮಾನಸಿಕ ಅಸ್ವಸ್ಥರು ಕುತಿದ್ದ ಜಾಗದಿಂದ ಅವರ ಲಾಲನೆ ಪಾಲನೆಯ ಫೋಟೋಗಳನ್ನು ಕ್ಲಿಕ್ಕಿಸಿ ಪತ್ರಿಕೆಗೆ ನೀಡಿದ್ದೆ ಅಂದು ಮುಖಪುಟದಲ್ಲಿ ಸುದ್ದಿ ಪ್ರಕಟವಾದಾಗ ಪತ್ರಿಕೆ ನೋಡಿ ಮಾರನೆ ಬೆಳಗ್ಗೆ ಫೋನ್ ಬಂತು ನೋಡಿದರೆ ದಕ್ಷ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಅವರದ್ದು ನಾನು ನಮಸ್ಕಾರ ಸಾರ್ ಎಂದಾಕ್ಷಣ ಒಳ್ಳೆಯ ಫೋಟೋ ಒಳ್ಳೆಯ ಕೆಲಸ ಮಾಡಿದ್ದೀರ ಎಂದು ಹೇಳಿದ್ದು ಇನ್ನು ಮನಸ್ಸಿನಲ್ಲಿ ಅಚ್ಚಹಸಿರಾಗಿದೆ.ಮಾನಸಿಕ ಅಸ್ವಸ್ಥರನ್ನು ಕರೆತಂದು ಎಸ್ಪಿ ಸಾಹೇಬರೆ ನಿಂತು ಸಿಬ್ಬಂದಿಗಳಿಂದ ಕಟಿಂಗ್ ,ಶೇವಿಂಗ್,ಸ್ನಾನ ಮಾಡಿಸಿ ಹೊಸ ಬಟ್ಟೆ ಕೊಡಿಸಿ ಹೊಟ್ಟೆ ತುಂಬಾ ಆಹಾರ ಕೊಟ್ಟು ದೇವರು ಮೆಚ್ಚುವ ಕೆಲಸ ಮಾಡಿದ ಪೊಲೀಸ್ ಇಲಾಖೆಯ ರಿಯಲ್ ಹೀರೊ ಮಧುಕರ್ ಶೆಟ್ಟಿ ಅವರ ಮಾನವೀಯತೆ ಹೃದಯಕ್ಕೆ ಪ್ರತ್ಯಕ್ಷ ನಿದರ್ಶನವಿದು. ಅವರ ಆತ್ಮಕ್ಕೆ ಶಾಂತಿ ದೊರೆತು ಅವರ ಕುಟುಂಬ ಹಾಗೂ ಹಿತೈಶಿಗಳಿಗೆ ದುಖಃ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎ.ಎನ್.ಪ್ರಸನ್ನ ಮತ್ತು ಕುಟುಂಬ.
ನ್ಯೂಸ್ ಫೋಟೋ ಗ್ರಾಫರ್.ಚಿಕ್ಕಮಗಳೂರು

 

Leave a Reply

Your email address will not be published.