ಮೆಲ್ಬರ್ನ್ ಅಂಗಳದಲ್ಲಿ ಭಾರತಕ್ಕೆ ಐತಿಹಾಸಿಕ ಜಯ – ಕೊಹ್ಲಿಪಡೆಗೆ ಅಭಿನಂದನೆಗಳ ಸುರಿಮಳೆ

ಮೆಲ್ಬರ್ನ್ ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ಐತಿಹಾಸಿಕ ಜಯ ದಾಖಲಿಸಿದ್ದು, ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಆಸೀಸ್ ವಿರುದ್ಧ ಜಯಭೇರಿ ಬಾರಿಸಿದ ಟೀಮ್ ಇಂಡಿಯಾಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳ ಸುರಿಮಳೆಯಾಗಿದೆ.

ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಕಾಂಗರೂ ಬಳಗಕ್ಕೆ ಸೋಲಿನ ಪಂಚ್ ನೀಡಿರುವ ಕೊಹ್ಲಿ ನೇತೃತ್ವದ ಭಾರತ ತಂಡಕ್ಕೆ ಮಾಜಿ ಕ್ರಿಕೆಟರ್ ಗಳಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಆಕಾಶ್ ಚೋಪ್ರಾ ಸೇರಿದಂತೆ ಹಲವರು  ಟ್ವಿಟರ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.

Leave a Reply

Your email address will not be published.