ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಅವರ ಅಗಲಿಕೆಗೆ ನೊಂದ ಪೊಲೀಸ್ ಸಿಬ್ಬಂದಿಗಳ ಸಂತಾಪ

ಪೊಲೀಸ್ ವೃತ್ತಿ ಜೀವನದಲ್ಲಿ ಹಲವಾರು ಮಂದಿ ಪೊಲೀಸ್ ಅಧಿಕಾರಿಗಳು ಪರಿಚಯವಾಗಿದ್ದಾರೆ. ಆದರೆ ಎಲ್ಲರ ಮಧ್ಯೆ ತುಂಬಾ ವಿಭಿನ್ನ ಸ್ಥಾನ ಗಿಟ್ಟಿಸಿಕೊಂಡವರು ಮಧುಕರ್ ಶೆಟ್ಟಿ ಸಾಹೇಬರು. ಬಹುಷಃ ಅವರಂತಹ ಮತ್ತೊಬ್ಬ ಅಧಿಕಾರಿ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲೇ ಇರ್ಲಿಕ್ಕಿಲ್ಲ.. ಅಷ್ಟರಮಟ್ಟಿಗೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ.. 2011ರಲ್ಲಿ ಲೋಕಾಯುಕ್ತ ಇಲಾಖೆಯಲ್ಲಿ ಅನುಭವಿಸಿದ ನೋವಿನಿಂದಾಗಿ ಇಲಾಖೆಗೆ ತಾತ್ಕಾಲಿಕ ಗುಡ್ ಬೈ ಹೇಳಿ ಉನ್ನತ ವ್ಯಾಸಂಗಕ್ಕಾಗಿ USAಗೆ ಹೋದ್ರು. 2016ರಲ್ಲಿ ಭಾರತಕ್ಕೆ ವಾಪಾಸ್ ಆದ ಮಧುಕರ್ ಶೆಟ್ಟಿಯವರಿಗೆ promotion ಆಗಿ DIG ಆಗಿದ್ರು. ಅದೇ ವರ್ಷ ತರಬೇತಿ ಮತ್ತು ನೇಮಕಾತಿ ಇಲಾಖೆಯ DIG ಆಗಿ ಸರ್ಕಾರ ಅವರಿಗೆ ಹುದ್ದೆ ನೀಡಿತ್ತು. ಆದರೆ‌ ನಂತರದ ದಿನಗಳಲ್ಲಿ ಇದೂ ಸಹ ಅವರಿಗೆ ನೆಮ್ಮದಿ ಅನಿಸಿರಲಿಲ್ಲ. State service ಸಾಕು ಅಂತ central service ಗೆ ನೇಮಕಗೊಂಡು NPA(National Police Academy) ಉಪ‌ನಿರ್ದೇಶಕರಾದ್ರು. ಸದ್ಯ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಮಧುಕರ್ ಶೆಟ್ಟಿ ಹೃದಯ ಸಂಬಂಧಿ ಖಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.. ಅವರ ಆತ್ಮಕ್ಮೆ ಶಾಂತಿ ಸಿಗಲಿ..

ಓರ್ವ ಐಪಿಎಸ್ ಅಧಿಕಾರಿಯಾಗಿ ಮಧುಕರ್ ಶೆಟ್ಟಿ ಹೇಗಿದ್ರು ಅನ್ನೋದಿಕ್ಕೆ ಒಂದೆರಡು ಉದಾಹರಣೆಗಳು.. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಡಿಸಿಪಿ ಆಗಿದ್ದ ಮಧುಕರ್ ಶೆಟ್ಟಿ ತಮ್ಮ ವಿಭಾಗಕ್ಕೆ ವರ್ಗಾವಣೆಯಾಗಿ ಬರ್ತಿದ್ದ ಅಧಿಕಾರಿಗಳಿಗೆ ಹೇಳ್ತಿದ್ದುದು ಒಂದೇ ಮಾತು.. ಇಷ್ಟು ದಿನ ಹೇಗಿದ್ರೋ ಗೊತ್ತಿಲ್ಲ. ಆದ್ರೆ‌ ಇನ್ಮುಂದೆ ನಿಷ್ಠಾವಂತರಾಗಿ ಕೆಲಸ ಮಾಡಿ..

2016ರಲ್ಲಿ ಉನ್ನತ ವ್ಯಾಸಂಗ ಮುಗಿಸಿ ಭಾರತಕ್ಕೆ ಬಂದ ಮಧುಕರ್ ಶೆಟ್ಟಿ ಡ್ಯೂಟಿಗೆ ರಿಪೋರ್ಟ್ ಮಾಡ್ಕೊಳ್ಳೊಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿದ್ರು. ತನ್ನ ಜೊತೆಗಿದ್ದ ಮಗಳನ್ನು ಪರಿಚಿತ ಅಧಿಕಾರಿಯೊಬ್ಬರ ಬಳಿ ಬಿಟ್ಟು ನೋಡಿಕೊಳ್ಳುವಂತೆ ಹೇಳಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿದ್ರು‌. ರಿಪೋರ್ಟ್ ಮಾಡ್ಕೊಂಡು ವಾಪಾಸ್ ಬಂದ ಮಧುಕರ್ ಶೆಟ್ಟಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಹೊರಬಂದು ಮಗಳನ್ನು ಕರೆದುಕೊಂಡು ಆಟೋ ಹತ್ತಿಕೊಂಡು ಹೊರಟೇಬಿಟ್ಟಿದ್ರು.. ಅವರ ಜೊತೆಗೆ(ಅವರ ವಿಭಾಗದಲ್ಲಿ ಎಸಿಪಿ, ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಆಗಿ) ಕರ್ತವ್ಯ ನಿರ್ವಹಿಸಿದವರು ಸಾಹೇಬರನ್ನು ಕಳುಹಿಸಿಕೊಡೋಕೆ ಬರೋ ಮೊದ್ಲೇ ಸಾಹೇಬ್ರು ಹೊರಟಾಗಿತ್ತು.‌ ಒಬ್ರು DIG Rank ಅಧಿಕಾರಿ ಆಟೋರಿಕ್ಷಾದಲ್ಲಿ ಓಡಾಡ್ತಾರೆ ಅಂದ್ರೆ ಅವರ simplicity ಅರ್ಥ ಆಗತ್ತೆ..

ಹೀಗೆ ಓಂದಲ್ಲ ಎರಡಲ್ಲ.. ಮಧುಕರ್ ಶೆಟ್ಟಿ ಅವರ ಬಗ್ಗೆ ಹತ್ತು ಹಲವು ಉದಾಹರಣೆಗಳಿವೆ.. ಈಗಿನ ಕೆಲವು ಅಧಿಕಾರಿಗಳಂತೆ ಯಾವತ್ತೂ ಮಾಧ್ಯಮದ ಮುಂದೆ ಬಂದವರಲ್ಲ.. ತಾನಾಯಿತು ತನ್ನ ಕೆಲಸವಾಯಿತು. ಅವರ ಬದುಕಲ್ಲಿ ಇದ್ದಿದ್ದು ಅಷ್ಟೇ.. ತಾನು ನಿರ್ವಹಿಸುತ್ತಿರುವ ಕೆಲಸಕ್ಕೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಇದ್ರು.. ಎಲ್ಲಕ್ಕಿಂತ ಹೆಚ್ಚಾಗಿ ತಾನು ನಂಬಿದ್ದ ನೈತಿಕತೆಗೆ ಸ್ವಲ್ಪವೂ ಧಕ್ಕೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ರು.. ಕೊನೆಯವರೆಗೂ ಅವರು ಉಳಿಸಿಕೊಂಡಿದ್ದು ಅದೊಂದನ್ನೇ.. ನೈತಿಕತೆ ಮತ್ತು ಪ್ರಾಮಾಣಿಕತೆ.. ರಾಜ್ಯದಲ್ಲಿ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ತುಂಬಾ ಜನ‌ ಇದ್ದಾರೆ.. ಆದ್ರೆ ಮಧುಕರ್ ಶೆಟ್ಟಿ ಅವರನ್ನು replace ಮಾಡುವ ಮತ್ತೊಬ್ಬ ಅಧಿಕಾರಿಯಿಲ್ಲ.. ಅದ್ಕೇ ಇರ್ಬಹುದು.. ಹಲವಾರು ಮಂದಿ ಪೊಲೀಸರು status ಹಾಕೊಂಡಿದ್ದಾರೆ.. ಸರ್ ನಿಮ್ಮಂತಹ ಪ್ರಾಮಾಣಿಕ ಅಧಿಕಾರಿಗಳಿಗೆ‌ ಇದು ಯೋಗ್ಯ ಸ್ಥಳವಲ್ಲ‌ ಅಂತ.. ಹಾಗಂತ ಅವರು ಇಷ್ಟು ದಿನ‌ ಬದುಕಿದ್ದು ತಪ್ಪು ಅಂತಲ್ಲ.. ಆದರೆ‌ ನಿಮ್ಮಂತಹ ಅಧಿಕಾರಿಯನ್ನು ಬಳಸಿಕೊಳ್ಳೋಕೆ ನಮಗೆ, ಈ ಸಮಾಜಕ್ಕೆ ಯೋಗ್ಯತೆ ಇಲ್ಲ ಅಂತ.. ನಿಜ ಸಾರ್.. ನಿಮ್ಮಂತಹ ದಕ್ಷ ಅನ್ನೋದಿಕ್ಕೆ ಅನ್ವರ್ಥರೂಪವಾಗಿರೋ ಅಧಿಕಾರಿಗಳಿಗೆ ಇದು ಕಾಲವಲ್ಲ.. Miss you ಅನ್ನೋ ವರ್ಡ್ ನಿಮ್ಗೆ ತುಂಬಾ ಸರಳವಾಯ್ತು.. ನೀವು ವಾಪಾಸ್ ಬರಲ್ಲ ಅನ್ನೋದು ಗೊತ್ತಿದೆ‌. But still we all miss you lot… RIP..

Leave a Reply

Your email address will not be published.

Social Media Auto Publish Powered By : XYZScripts.com