Bigg Boss 6 : ಸ್ಪರ್ಧಿಗಳಿಂದ ಫುಟ್ಬಾಲ್, ಬ್ಯಾಡ್ಮಿಂಟನ್, ಕ್ರಿಕೆಟ್ ಆಟ : ಕ್ಯಾಪ್ಟನ್ ಆ್ಯಂಡಿ

ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಕಿರಿಕಿರಿ ಮಾಡುವವರು ಯಾರು ಎಂದು ಸ್ಪರ್ಧಿಗಳಿಗೆ ಕೇಳಿದರೆ ಥಟ್ ಅಂತ ಮೊದಲ ಹೆಸರು ಬರೋದು ಆ್ಯಂಡಿ . ಆದರೂ ಆ್ಯಂಡಿ ನೇ ಈ ಬಾರಿ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಈ ವಿಚಾರದಲ್ಲಿ ಮನೆಯ ಕೆಲ ಸದಸ್ಯರಿಗೆ ಬೇಸರ ಕೂಡ ಇದೆ. ಅತೀ ಹೆಚ್ಚು ಬೇಸರ ತಂದಿದ್ದು ರಶ್ಮಿಗೆ. ಯಾಕೆಂದರೆ ಅವರು ಬಿಗ್ ಬಾಸ್ ಮನೆಗೆ ಬಂದು ಮುಕ್ಕಾಲು ದಿನಗಳು ಕಳೆಯುತ್ತಾ ಬಂದು ಆದರೂ ಅವರು ಒಂದು ಬಾರಿಯಾದ್ರೂ ಕ್ಯಾಪ್ಟನ್ ಆಗಿಲ್ಲ. ಜೊತೆಗೆ ಕ್ಯಾಪ್ಟನ್ ಪ್ರತಿಸ್ಪರ್ಧಿಯ ಆಟದಲ್ಲಿ ಆ್ಯಂಡಿ ರಶ್ಮಿಯನ್ನ ತಳ್ಳಿದರು ಎನ್ನುವ ಆಪಾದನೆ ಹೊತ್ತುಕೊಂಡರು ಆ್ಯಂಡಿ . ತಮಗೆ ಕಂಪೇರ್ ಮಾಡಿದರೂ ಆ್ಯಂಡಿ ಬೆಸ್ಟಾ ಅನ್ನೋ ಪ್ರಶ್ನೆ ರಶ್ನಿದು. ಸದಾ ಕಿರಿಕಿರಿಯನ್ನುಂಟು ಮಾಡುವ ಆ್ಯಂಡಿ ಈ ಬಾರಿ ತಾವು ಕ್ಯಾಪ್ಟನ್ ಆಗಿ ಮನೆಯ ಸದಸ್ಯರನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕು.

ಇನ್ನೂ ಬಿಗ್ ಬಾಸ್ ಮನೆಯಲ್ಲಿ ಮೂರು ಆಟಗಳನ್ನ ಆಡಿಸಲಾಯಿತು. ಪ್ರತಿನಿತ್ಯ ಬಿಗ್ ಬಾಸ್ ಮನೆಯಲ್ಲಿ ಆಟಗಳನ್ನ ಆಡಿಸುತ್ತಾರೆ. ಅದರಲ್ಲೇನಿದೆ ವಿಶೇಷ ಅಂದುಕೊಳ್ಳಬೇಡಿ. ಈ ಬಾರಿ ಸ್ಪರ್ಧಿಗಳು ಬಾಲ್, ಕಾಕ್, ಬ್ಯಾಟ್ ಹಿಡಿದು ಆಟ ಆಡಿದರು. ಒಂದೊಂದು ಆಟವನ್ನು ಆಡಿದವರು ಮಾತ್ರ ಇಬ್ಬಿಬ್ಬರು.

ಫುಡ್ಬಾಲ್ ಆಟದಲ್ಲಿ ಶಶಿ ವಿನ್ ಆದರೆ ಕವಿತ ರನ್ನರ್ ಅಪ್ ಆದ್ರೂ, ಬ್ಯಾಡ್ಮಿಂಟನ್ ನಲ್ಲಿ ನಿವೇದಿತಾ ರನ್ನರ್ ಅಪ್ ಆದ್ರೆ ನವೀನ್ ವಿನ್ ಆದ್ರು, ಇನ್ನೂ ಕ್ರಿಕೆಟ್ ನಲ್ಲಿ ರಾಕೇಶ್ ವಿನ್ ಆದ್ರೆ ರಶ್ಮಿ ರನ್ನರ್ ಅಪ್ ಆದ್ರೂ. ಕ್ಯಾಪ್ಟನ್ ಆ್ಯಂಡಿ ಪದಕ ನೀಡಿ ಗೌರವಿಸಿದ್ರು.

ವಿಶೇಷ ಪ್ರತಿಭೆಗಳಿಗೆ ವಿಶೇಷ ಆಟವನ್ನ ನೀಡಿದ್ರು ಬಿಗ್ ಬಾಸ್. ಅದು ಜೀವಿತಾ ಬೆಲ್ಲಿ ಡ್ಯಾನ್ಸ್ ನ್ನು ನವೀನ್ ಗೆ ಹೇಳಿಕೊಡಬೇಕು. ನವೀನ್ ಹಾಡೊಂದನ್ನ ಜೀವಿತಾಗೆ ಹೇಳಿಕೊಡಬೇಕು. ಇದರಲ್ಲಿ ಯಾರು ಚೆನ್ನಾಗಿ ಕಲಿಯುತ್ತಾರೆ ಅನ್ನೋದನ್ನ ಬಿಗ್ ಬಾಸ್ ಗಮನಿಸುತ್ತಾರೆ. ಹಾಗಾದರೆ ಮುಂದಿನ ದಿನ ಜೀವಿತಾ ಹಾಗೂ ನವೀನ್ ರಲ್ಲಿ ಯಾರು ಚೆನ್ನಾಗಿ ಕಲೆದುಕೊಳ್ಳುತ್ತಾರೆ. ಜೊತೆಗೆ ಆ್ಯಂಡಿ  ಕ್ಯಾಪ್ಟನ್ ಆಗಿ ಮನೆಯ ಸದಸ್ಯರನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕು.

 

One thought on “Bigg Boss 6 : ಸ್ಪರ್ಧಿಗಳಿಂದ ಫುಟ್ಬಾಲ್, ಬ್ಯಾಡ್ಮಿಂಟನ್, ಕ್ರಿಕೆಟ್ ಆಟ : ಕ್ಯಾಪ್ಟನ್ ಆ್ಯಂಡಿ

  • December 30, 2018 at 12:09 AM
    Permalink

    What’s up, I desire to subscribe for this weblog to obtain latest updates, therefore where can i do it please help.

    Reply

Leave a Reply

Your email address will not be published.

Social Media Auto Publish Powered By : XYZScripts.com