Boxing Day Test : ಭಾರತಕ್ಕೆ ಗೆಲುವಿಗೆ ಇನ್ನೂ 2 ವಿಕೆಟ್ ಅಗತ್ಯ ; ಕೊಹ್ಲಿಪಡೆಯನ್ನು ಕಾಡಿದ ಕಮ್ಮಿನ್ಸ್

ಮೆಲ್ಬರ್ನ್ ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ಹೊಸ್ತಿಲಲ್ಲಿದ್ದು, ಆಸ್ಟ್ರೇಲಿಯಾ ತಂಡದ ಇನ್ನೂ 2 ವಿಕೆಟ್ ಉರುಳಿಸುವ ಅಗತ್ಯವಿದೆ.

ಗೆಲ್ಲಲು 399 ರನ್ ಟಾರ್ಗೆಟ್ ಬೆನ್ನತ್ತಿರುವ ಆತಿಥೇಯ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 258ಕ್ಕೆ 8 ವಿಕೆಟ್ ಕಳೆದುಕೊಂಡಿದೆ. ಆಸ್ಟ್ರೇಲಿಯಾ ತನ್ನ ಗೆಲುವಿಗೆ ಇನ್ನೂ 141 ರನ್ ಗಳಿಸಬೇಕಿದ್ದು, ನಾಲ್ಕನೇ ದಿನದಾಟದ ಅಂತ್ಯಕ್ಕೆ ಪ್ಯಾಟ್ ಕಮ್ಮಿನ್ಸ್ (61) ಹಾಗೂ ನೇಥನ್ ಲಾಯನ್ (6) ಅಜೇಯರಾಗುಳಿದಿದ್ದಾರೆ.

ಬೌಲಿಂಗ್ ನಲ್ಲಿ 6 ವಿಕೆಟ್ ಪಡೆದಿದ್ದ ಪ್ಯಾಟ್ ಕಮ್ಮಿನ್ಸ್, ಬ್ಯಾಟಿಂಗ್ ನಲ್ಲಿ ಅರ್ಧಶತಕ ಬಾರಿಸಿ ಕೊಹ್ಲಿಪಡೆಯ ಜಯದ ಕನಸಿಗೆ ತಡೆಗೋಡೆಯಾದರು. ಭಾರತದ ಪರವಾಗಿ ರವೀಂದ್ರ ಜಡೇಜಾ 3, ಮೊಹಮ್ಮದ್ ಶಮಿ 2, ಜಸ್ಪ್ರೀತ್ ಬುಮ್ರಾ 2 ಹಾಗೀ ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಭಾರತ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 106 ಆಗಿದ್ದಾಗ ಡಿಕ್ಲೇರ್ ಮಾಡಿಕೊಂಡು ಆಸ್ಟ್ರೇಲಿಯಾದ ಗೆಲುವಿಗೆ 399 ರನ್ ಟಾರ್ಗೆಟ್ ನೀಡಿತ್ತು.

Leave a Reply

Your email address will not be published.

Social Media Auto Publish Powered By : XYZScripts.com