ಬಿಜೆಪಿ ಅಂಬೇಡ್ಕರ್ ಸಂವಿಧಾನದ ಬದಲು RSS ಅಜೆಂಡಾ ಜಾರಿಗೊಳಿಸಲು ಹೊರಟಿದೆ : ತೇಜಸ್ವಿ ಯಾದವ್

‘ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಂತಹ ವಾತಾವರಣವಿದೆ’ ಎಂದು ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಕೇಂದ್ರ ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ‘ ಪ್ರಧಾನಿ ಮೋದಿ ತಾವು ನೀಡಿದ್ದ ಯಾವುದೇ ಭರವಸೆಗಳನ್ನು ಇದುವರೆಗೆ ಈಡೇರಿಸಿಲ್ಲ. ಕೇಂದ್ರ ಸರ್ಕಾರ ಆರಂಭಿಸಿದ ಗಂಗಾ ಸಫಾಯಿ ಯೋಜನೆ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳನ್ನಯ ಯಶಸ್ವಿಯಾಗಿಲ್ಲ ‘ ಎಂದರು.

‘ ಮೋದಿಜಿ ಮತ್ತು ನಿತೀಶ್ ಕುಮಾರ್ ಎಲ್ಲರೂ ಸೇರಿಕೊಂಡು ದೇಶದೆಲ್ಲೆಡೆ ನಾಗಪುರದ ಕಾನೂನನ್ನು ಜಾರಿಗೊಳಿಸಲು ಹೊರಟಿದ್ದಾರೆ. ಇವರೆಲ್ಲರೂ ಅಂಬೇಡ್ಕರ್ ವಿರಚಿತ ಸಂವಿಧಾನದ ಬದಲು ಆರ್ ಎಸ್ಎಸ್ ಅಜೆಂಡಾ ಜಾರಿಗೊಳಿಸಲು ಬಯಸುತ್ತಿದ್ದಾರೆ ‘ ಎಂದು ತೇಜಸ್ವಿ ಯಾದವ್ ಕಿಡಿ ಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com