2019ರಲ್ಲಿ ಹಸಮಣೆ ಏರಲಿದ್ದಾರೆ ಸಲ್ಮಾನ್ ಖಾನ್ – ಲುಲಿಯಾ ವೆಂಟರ್..?

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಗುರುವಾರ 53ನೇ ಹುಟ್ಟಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಸಾಕಷ್ಟು ಚಿತ್ರರಂಗದ ಗಣ್ಯರು, ಬಂಧುಗಳು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಸಲ್ಲೂಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂತು. ಆದರೆ ಈ ವೇಳೆ ಮತ್ತೊಂದು ಸಿಹಿ ಸುದ್ದಿಯನ್ನು ಕರಣ್ ಜೋಹಾರ್ ಹೊರಹಾಕಿದ್ದಾರೆ. ಅದವೇ ಸಲ್ಮಾನ್ ಖಾನ್ ಮದುವೆ ವಿಚಾರ. 

12 ಪ್ರೇಯಸಿಯರ ಜೊತೆ ಸಲ್ಲೂ ಪ್ರೀತಿ, ಪ್ರೇಮ, ಪ್ರಣಯ. ಸಲ್ಲೂ ಒಂದೊಂದು ಲವ್ ಸ್ಟೋರಿಯೂ ಕೂಡ ಸಿನಿಮಾದಷ್ಟೇ ರೋಚಕವಾಗಿವೆ. ಇದರಲ್ಲಿ ಐಶ್ ಮತ್ತು ಸಲ್ಲೂ ಪ್ರೇಮ್ ಕಹಾನಿ ಬಾಲಿವುಡ್ ನಲ್ಲಿ ಅತ್ಯಂತ ಕೆಟ್ಟದಾದ ವಿಚಾರಗಳಿಂದ ಅಂತ್ಯಗೊಂಡಿತು. ಅಷ್ಟಕ್ಕೂ ಐಶ್ ಹಾಗೂ ಸಲ್ಲೂ ಪ್ರೇಮ್ ಕಹಾನಿ ಶುರುವಾಗಿದ್ದು ‘ ಹಮ್ ದಿಲ್ ದೇ ಚುಕಿ ಸನಮ್’ ಸಿನಿಮಾದ ಮೂಲಕ. ಐಶ್ ಳನ್ನು ತುಂಬಾನೇ ಪ್ರೀತಿಸುತ್ತಿದ್ದ ಸಲ್ಲೂ ಸಿನಿಮಾದಲ್ಲಿ ನಟನೆಗೆ ಅಡ್ಡಿಯನ್ನುಂಟು ಮಾಡುತ್ತಿದ್ದರು. ಚಲ್ತೆ ಚಲ್ತೆ ಸಿನಿಮಾದಲ್ಲಿ ನಿರತಳಾಗಿದ್ದ ಐಶ್ ಳನ್ನು ಚಿತ್ರದಲ್ಲಿ ನಟನೆ ಮಾಡದಂತೆ ಕುಡಿದು ಗಲಾಟೆ ಯನ್ನ ಮಾಡಿದ್ದರು. ದೈಹಿಕ ಹಲ್ಲೆ ಕೂಡ ಮಾಡಿದರೂ ಎನ್ನುವ ಆರೋಪ ಐಶ್ ಮಾಡಿದ್ದರು. ಆದರೆ ಹಲ್ಲೆ ವಿಚಾರಕ್ಕೆ ಮಾತನಾಡಿದ ಸಲ್ಲೂ ನಾನು ಹಲ್ಲೆ ಮಾಡಿದರೆ ಐಶ್ ಉಳಿಯುತ್ತಿರಲಿಲ್ಲ ಎಂದಿದ್ದರು. ಹೀಗೆ ಐಶ್ ಮೇಲಿರುವ ಅತಿಯಾದ ಪ್ರೀತಿ ಹೀಗೆ ಬ್ರೇಕ್ ಅಪ್ ಆಗಿ ಹೋಯ್ತು. ಬಾಲಿವುಡ್ ನಲ್ಲೇ ಇದೊಂದು ಅತೀ ಕೆಟ್ಟದಾಗಿ ದೂರವಾದ ಸ್ಟೋಡಿ ಅಂತ ಹೆಸರು ಮಾಡಿತು.

ಇಷ್ಟಕ್ಕೇ ಸಲ್ಲೂ ಪ್ರತೀಯ ದೂಣಿ ನಿಲ್ಲಲಿಲ್ಲಾ. ಸಂಗೀತಾ, ಕತ್ರೀನಾ ಕೈಫ್ ನಂತಹ ಚಂದುಳ್ಳಿ ಚೆಲುವೆಯರು ಸಲ್ಲೂ ಪ್ರೀತಿಯ ದೋಣಿಯಲ್ಲಿ ಪ್ರಾಯಾಣ ಮಾಡಿದ್ದಾರೆ. ಆದರೆ ಇವರೆಲ್ಲರೊಂದಿಗೆ ಬ್ರೇಕ್ ಅಪ್ ಆದ ಸಲ್ಲೂ ಸದ್ಯ ಲುಲಿಯಾ ವೆಂಟೂರ್ ನೊಂದಿಗೆ ಡಯೇಟ್ ನಲ್ಲಿದ್ದಾರಂತೆ. ಪ್ರತೀ ಪಾರ್ಟಿ ಫಂಕ್ಷನ್ಸ್ ಗೂ ಸಲ್ಲೂ ಈಕೆಯೊಂದಿಗೆ ಹೋಗುತ್ತಾರಂತೆ. 

ನಿರೂಪಕ ಕರಣ್ ಜೋಹಾರ್ ಕಾರ್ಯಕ್ರಮವೊಂದರಲ್ಲಿ ಸಲ್ಲೂ 2019ರಲ್ಲಿ ಮದುವೆಯಾಗುತ್ತಾರೆ. ಆದರೆ ಹುಡುಗಿಯನ್ನಲ್ಲಾ.. ಬದಲಾಗಿ ಮೂರು ಸಿನಿಮಾಗಳ ಜೊತೆ ಎಂದು ಶಾಕ್ ನೀಡಿದ್ದಾರೆ.

ಸಲ್ಮಾನ್ ಖಾನ್ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರೊಂದಿಗೆ ತಮ್ಮ ಪನ್ವೇಲ್ ಫಾರ್ಮ್ ಹೌಸ್ ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಈ ವೇಳೆ ಬಾಲಿವುಡ್ ನಟ ಅನಿಲ್ ಕಪೂರ್, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ಜಾಕ್ವೆಲಿನ್ ಫರ್ನಾಂಡಿಸ್, ಮೌನಿ ರಾಯ್, ಸುನಿಲ್ ಗ್ರೋವರ್ ಮತ್ತಿತರರು ಹಾಜರಿದ್ದರು. ಸಲ್ಲೂ ಬರ್ತ್ ಡೇ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಸಲ್ಮಾನ್ ಖಾನ್ ಮನೆ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಹೊರಗಡೆ ಅಭಿಮಾನಿಗಳು ಜಮಾಯಿಸಿದ್ದರು.

 

Leave a Reply

Your email address will not be published.