WATCH : ಬರ್ತ್ ಡೇ ಬಾಯ್ ಸಲ್ಲೂ ಜೊತೆ ಸ್ಟೆಪ್ ಹಾಕಿದ ಸುಶ್ಮಿತಾ ಸೇನ್ – ವಿಡಿಯೋ ವೈರಲ್

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಗುರುವಾರ ಜನ್ಮದಿನದ ಸಂಭ್ರಮದಲ್ಲಿದ್ದು, 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್ ಡೇ ಬಾಯ್ ಸಲ್ಮಾನ್ ಖಾನ್ ಕುಟುಂಬದ ಸದಸ್ಯರು ಹಾಗೂ ಆಪ್ತ ಸ್ನೇಹಿತರೊಂದಿಗೆ ಪನ್ವೇಲ್ ನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಬರ್ತ್ ಡೇ ಪಾರ್ಟಿಯಲ್ಲಿ ಅನಿಲ್ ಕಪೂರ್, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ಸುನಿಲ್ ಗ್ರೋವರ್ ಸೇರಿದತೆ ಹಲವು ನಟ, ನಟಿಯರು ಹಾಜರಿದ್ದರು.  ಈ ವೇಳೆ ಬರ್ತ್ ಡೇ ಬಾಯ್ ಸಲ್ಮಾನ್ ಜೊತೆಗೆ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಹೆಜ್ಜೆ ಹಾಕಿದ್ದಾರೆ. ವಿಡಿಯೋ ಇದೀಗ ವೈರಲ್ ಆಗಿದೆ.

ಸುಶ್ಮಿತಾ ಸೇನ್ 1994ರಲ್ಲಿ ಭುವನ ಸುಂದರಿ ಕಿರೀಟ ಧರಿಸಿದ್ದರು. ಸಲ್ಮಾನ್ ಖಾನ್ ಹಾಗೂ ಸುಶ್ಮಿತಾ ಸೇನ್ ‘ಬೀವಿ ನಂಬರ್ 1’, ‘ಮೈನೆ ಪ್ಯಾರ್ ಕ್ಯೂಂ ಕಿಯಾ’ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು.

Leave a Reply

Your email address will not be published.