ಕಾರ್ಪೊರೇಟರ್ ಅನ್ಸರ್ ಪಾಷಾ ಕಿರುಕುಳ : ತಾಳದ ಆಯೇಷಾ ಆತ್ಮಹತ್ಯೆಗೆ ಯತ್ನ..

ವಾರ್ಡ್ ನಂ. 180 ಕಾಂಗ್ರೆಸ್ ಪಾಲಿಕೆ  ಸದಸ್ಯ ಅನ್ಸರ್ ಪಾಷಾ ಮಹಿಳೆಯೊಬ್ಬರಿಗೆ ಕಿರುಕುಳ ಕೊಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ತಮಗೆ ನೀಡುವ ಕಿರುಕುಳ ಸಹಿಸಲಾರದೆ ಕೈ ಕೂಯ್ದುಕೊಂಡು ಬೆಂಗಳೂರಿನಲ್ಲಿ ಆಯೇಷಾ ಎನ್ನುವ ಮಹಿಳೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ. ಕಿರುಕುಳದ ಆರೋಪದ ಜೊತೆಗೆ ಆಯೇಷಾ ತನ್ನ ಪತ್ನಿಯನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಆರೋಪವನ್ನೂ ಕೂಡ ಮಾಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಈ ರೀತಿಯ ಆರೋಪಗಳನ್ನು ಮಾಡಿದ ಆಯೇಷಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾನು ಸತ್ತ ಮೇಲೆ ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಅವರು ವಿಡಿಯೋ ಮಾಡಿದ್ದು ವೈರಲ್ ಆಗಿದೆ. ಪಾಲಿಕೆ  ಸದಸ್ಯ ಅನ್ಸರ್ ಪಾಷಾ ಹಾಗೂ ಈತನ ಸಹಚರರ ಮೇಲೆ ಆಯೇಷಾ ಆರೋಪ ಮಾಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ ಆಯೇಷಾ ಪೊಲೀಸ್ ದೂರಾ ನೀಡಿರಲಿಲ್ಲ. ಹೀಗಾಗಿ ಪೊಲೀಸ್ ತನಿಖೆ ಕೂಡ ನಡೆದಿಲ್ಲ. ಆದರೆ ಈ ರೀತಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಪ್ರಯತ್ನಸಿದ ಬಳಿಕ ತನಿಖೆ ಮಾಡಲಾಗುತ್ತಿದೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com