ಮುಂದಿನ ಪ್ರಧಾನಿ ಯಾರಾಗಲಿದ್ದಾರೆಂದು ಹೇಳಲು ಸಾಧ್ಯವಿಲ್ಲ : ಬಾಬಾ ರಾಮದೇವ್

‘ ದೇಶದಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿ ತುಂಬಾ ಕಠಿಣವಾಗಿದೆ. ದೇಶದ ಮುಂದಿನ ಪ್ರಧಾನಮಂತ್ರಿ ಯಾರಾಗಲಿದ್ದಾರೆಂದು ಹೇಳಲು ಸಾಧ್ಯವಿಲ್ಲ ‘ ಎಂದು ಯೋಗಗುರು ಬಾಬಾ ರಾಮದೇವ್ ಹೇಳಿದ್ದಾರೆ.

ರಾಮೇಶ್ವರಂನಲ್ಲಿ ನಡೆಯಲಿರುವ ಭಾರತ ಸ್ವಾಭಿಮಾನ ರಾಷ್ಟ್ರೀಯ ಸಭೆಯಲ್ಲಿ ಪಾಲ್ಗೊಳ್ಳಲು ಬಾಬಾ ರಾಮದೇವ್ ಮಂಗಳವಾರ ಮಧುರೈಗೆ ಆಗಮಿಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ, ವ್ಯಕ್ತಿಯನ್ನು ಬೆಂಬಲಿಸುತ್ತೀರಿ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಬಾಬಾ ರಾಮದೇವ್ ‘ ಸದ್ಯ ನನ್ನ ಗಮನ ರಾಜಕೀಯದ ಮೇಲಿಲ್ಲ ‘ ಎಂದು ಉತ್ತರಿಸಿದರು.

‘ನಮ್ಮ ಗುರಿ ಹಿಂದೂರಾಷ್ಟ್ರವಲ್ಲ, ಬದಲಾಗಿ ಆಧ್ಯಾತ್ಮಿಕ ರಾಷ್ಟ್ರ, ಆಧ್ಯಾತ್ಮಿಕ ವಿಶ್ವ ನಮ್ಮ ಗುರಿಯಾಗಿದೆ. ಯೋಗ ಮತ್ತು ವೈದಿಕ ಆಚರಣೆಗಳ ಮೂಲಕ ದೈವಿಕ, ಸಮೃದ್ಧ ಹಾಗೂ ಆಧ್ಯಾತ್ಮಮಯ ಭಾರತವನ್ನು ನಿರ್ಮಿಸಬೇಕಿದೆ ‘ ಎಂದು ರಾಮದೇವ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com