Afghanistan : ಕಾಬೂಲ್ ನ ಸರ್ಕಾರಿ ಕಟ್ಟಡದ ಮೇಲೆ ಉಗ್ರರ ದಾಳಿ – 43 ಜನರ ಸಾವು

ಅಫಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿರುವ ಸರ್ಕಾರಿ ಕಟ್ಟಡವೊಂದರ ಮೇಲೆ ಸೋಮವಾರ ಮಧ್ಯಾಹ್ನ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಟ 43 ಜನರು ಮೃತಪಟ್ಟಿದ್ದು, 10 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಬೂಲ್ ನಲ್ಲಿ ಈ ವರ್ಷ ನಡೆದಿರುವ ಅತ್ಯಂತ ಭೀಕರ ಉಗ್ರ ದಾಳಿ ಇದಾಗಿದ್ದು, ಇದುವರೆಗೆ ಯಾವುದೇ ಸಂಘಟನೆಗಳು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಸೋಮವಾರ ಮಧ್ಯಾಹ್ನ ವೇಳೆ ದಾಳಿ ನಡೆಸಿದ ಉಗ್ರರು, ಕಾಬೂಲಿನ ಸರ್ಕಾರಿ ಕಟ್ಟಡದ ಮುಂಭಾಗದಲ್ಲಿ ಕಾರ್ ಬಾಂಬ್ ಸ್ಫೋಟಿಸಿದ್ದಾರೆ. ಆ ಬಳಿಕ ಕಚೇರಿಯ ಒಳಗೆ ನುಗ್ಗಿ, ಅಲ್ಲಿ ಕೆಲಸ ಮಾಡುತ್ತಿದ್ದವರನ್ನು ಒತ್ತೆಯಾಳಾಗಿರಿಸಿಕೊಂಡಿದ್ದಾರೆ. ಅಫಘಾನಿಸ್ತಾನ ರಕ್ಷಣಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

7 thoughts on “Afghanistan : ಕಾಬೂಲ್ ನ ಸರ್ಕಾರಿ ಕಟ್ಟಡದ ಮೇಲೆ ಉಗ್ರರ ದಾಳಿ – 43 ಜನರ ಸಾವು

Leave a Reply

Your email address will not be published.

Social Media Auto Publish Powered By : XYZScripts.com