ಜಗತ್ತಿನೆಲ್ಲೆಡೆ ಕಳೆಕಟ್ಟಿದ ಕ್ರಿಸ್ಮಸ್ ಸಂಭ್ರಮ : ಚರ್ಚ್ ಗಳ ಅಲಂಕಾರಕ್ಕೆ ಮನಸೋತ ಜನರು

ಜಗತ್ತಿನೆಲ್ಲೆಡೆ ಕ್ರಿಸ್ ಮಸ್ ಆಚರಣೆ ಸಿದ್ಧತೆ ಪೂರ್ಣಗೊಂಡಿದ್ದು, ಇನ್ನೇನು ಏಸುಕ್ರಿಸ್ತನ ಜನ್ಮ ದಿನದ ಆಚರಣೆಯ ಕೆಲವೇ ಕೆಲವು ಗಂಟೆಗಳನ್ನು ನಗರ ನಿರೀಕ್ಷಿಸುತ್ತಿದೆ.

ಕ್ರಿಸ್ ಮಸ್ ಹಬ್ಬಕ್ಕೆ ಕೇವಲ ಕೆಲವೇ ಗಂಟೆಗಳು ಮಾತ್ರ ಬಾಕಿ ಇದೆ. ಇಡೀ ನಗರ ಕ್ರಿಸ್ ಮಸ್ ಹಬ್ಬದ ಆಗಮನಕ್ಕೆ ಸಜ್ಜಾಗುತ್ತಿದೆ. ಮಾರುಕಟ್ಟೆಯಲ್ಲಿ ನಾನಾ ಬಗೆಯ ನಕ್ಷತ್ರಗಳ ಮಾದರಿ , ಬಲೂನುಗಳು, ಕ್ರಿಸ್ ಮಸ್ ಟ್ರೀ, ಕ್ರಿಬ್ ಗಳು, ಸಾಂತಾ ಕ್ಲಾಸ್, ಉಡುಗೆ, ಶುಭ ಸಂಕೇತ ಗಂಟೆಗಳ ಮಾರಾಟ ಜೋರಾಗಿದ್ದು ನೋಡುಗರನ್ನು ಆಕರ್ಷಿಸುತ್ತಿದೆ.

ವಿವಿಧ ಮಳಿಗೆಗಳಲ್ಲಿ ಕ್ರಿಸ್ ಮಸ್ ಆಚರಣೆಯ ಸಾಮಗ್ರಿಗಳನ್ನು ಆಕರ್ಷಕವಾಗಿ ಜೋಡಿಸಿಟ್ಟು ಗ್ರಾಹಕರನ್ನು ಸೆಳೆಯಲಾಗುತ್ತದೆ. ಕ್ರಿಸ್ ಮಸ್ ಸಂದೇಶದ ಕಾರ್ಡ್ ಗಳು ಉಡುಗೊರೆಗಳು, ವಿಭಿನ್ನ ವಿನ್ಯಾಸ ಹಾಗೂ ಬಣ್ಣದ ಕ್ಯಾಲೆಂಡರ್ ಗಳು ಗೃಹಲಂಕಾರಕ್ಕೆ ಅಗತ್ಯವಾದ ತೋರಣ ಎಲ್ಲೆಲ್ಲೂ ಕಳೆ ಕಟ್ಟಿದೆ. ಶಿವಾಜಿನಗರ, ಜಯನಗರ, ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ , ಗಾಂಧಿ ಬಜಾರ್ ಮತ್ತಿತರೆಡೆಗಳಲ್ಲಿ ಕ್ರಿಸ್ ಮಸ್ ಹಬ್ಬಕ್ಕೆಂದೇ ಪ್ರತ್ಯೇಕ ಮಳಿಗೆಗಳನ್ನು ಹಾಕಲಾಗಿದೆ. ಉಳಿದ ಫ್ಯಾನ್ಸಿ ಸ್ಟೋರ್ ಗಳಲ್ಲಿ ಮಾರಾಟ ಜೋರಾಗಿದೆ.

ಕಾಲೇಜ್ ಗಳಲ್ಲಿ, ಮಾಲ್ ಗಳನ್ನು, ಮೈದಾನಗಳಲ್ಲಿ ಪ್ರಾರಂಭವಾಗಿರುವ ಕೇಕ್ ಶೋನಲ್ಲಿ ಜನರು ಪಾಲ್ಗೊಳ್ಳುತ್ತಿದ್ದಾರೆ.

ಕ್ಯಾರಲ್ ಸಿಂಗಿಂಗ್ ನ ಇಂಪು ನಗರದ ಹಲವು ಚರ್ಚ್ ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಕ್ಯಾರೆಲ್ ಸಿಂಗಿಂಗ್ ಗಳು ನಡೆಯುತ್ತದೆ. ಹಲವು ಚರ್ಚ್ ಗಳಲ್ಲಿ ಒಂದು ಬಾರಿ ಕನ್ನಡದಲ್ಲಿ ಮತ್ತೊಂದು ಬಾರಿ ಇಂಗ್ಲಿಷ್ ನಲ್ಲಿ ಪ್ರಾರ್ಥನೆ ನಡೆಡಯುವುದು ವಿಶೇಷ. ಡಿ.೧ರಿಂದಲೂ ಮನೆ ಮನೆಗೆ ತೆರಳಿ ಕ್ಯಾರೆಲ್ ಸಿಂಗಿಂಗ್ ಮೂಲಕ ಯೇಸು ಕ್ರಿಸ್ತನ ಸಂದೇಶ ಸಾರಲಾಗುತ್ತದೆ. ಪ್ರತಿ ಭಾನುವಾರ ಸ್ಪರ್ಧೆಗಳು ಹಾಗೂ ಪೂರಕ ಆಚರಣೆಗಳು ನಡೆಯುತ್ತಿದೆ

ಕ್ಯಾರಲ್ ಸಿಂಗಿಂಗ್ ನ ಇಂಪು ನಗರದ ಹಲವು ಚರ್ಚ್ ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಕ್ಯಾರೆಲ್ ಸಿಂಗಿಂಗ್ ಗಳು ನಡೆಯುತ್ತದೆ. ಹಲವು ಚರ್ಚ್ ಗಳಲ್ಲಿ ಒಂದು ಬಾರಿ ಕನ್ನಡದಲ್ಲಿ ಮತ್ತೊಂದು ಬಾರಿ ಇಂಗ್ಲಿಷ್ ನಲ್ಲಿ ಪ್ರಾರ್ಥನೆ ನಡೆಡಯುವುದು ವಿಶೇಷ. ಡಿ.೧ರಿಂದಲೂ ಮನೆ ಮನೆಗೆ ತೆರಳಿ ಕ್ಯಾರೆಲ್ ಸಿಂಗಿಂಗ್ ಮೂಲಕ ಯೇಸು ಕ್ರಿಸ್ತನ ಸಂದೇಶ ಸಾರಲಾಗುತ್ತದೆ. ಪ್ರತಿ ಭಾನುವಾರ ಸ್ಪರ್ಧೆಗಳು ಹಾಗೂ ಪೂರಕ ಆಚರಣೆಗಳು ನಡೆಯುತ್ತಿದೆ.

ವಿವಿಧ ಬಗೆಯ ಕೇಕ್ ಗಳು ಕ್ರಿಸ್ ಮಸ್ ಎಂದರೆ ಬಗೆ ಬಗೆಯ ನಾನಾ ವಿನದಯಾ, ಮತ್ತು ಸ್ವಾದದ ಕೇಕ್ ಗಳು ಕಣ್ಮುಂದೆ ಸುಳಿಯುತ್ತದೆ. ಈ ಸಂಭ್ರಮಕ್ಕೆ ಬೇಕರಿ ಯವರು ಈಗಾಗಲೇ ತರಹೇವಾರಿ ಕೇಕುಗಳನ್ನು ತಯಾರಿಸಿದ್ದಾರೆ. ಫಲ್ಂ ಕೇಕ್, ಬ್ಲ್ಯಾಕ್ ಫಾರೆಸ್ಟ್, ತುಪ್ಪದಲ್ಲಿ ತಯಾರಿಸಿದ ಘೀ ಕೇಕ್, ಅನಾನಸ್, ಬಟರ್ ಸ್ಕಾಚ್, ಸ್ಟ್ರಾಬೆರ್ರಿ ಚಾಕಲೇಟ್ ವೆನಿಲಾ ಸೇರಿದಂತೆ ಅನೇಕ ಕೇಕ್ ಲಭ್ಯವಿದೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com