1000 ಕೋಟಿ ಗಳಿಸಿದ 2.0 ಚಿತ್ರ : ನಿರ್ಮಾಪಕ, ರಜಿನಿಕಾಂತ್, ಅಕ್ಷಯ್, ಆಮಿ ಜಾಕ್ಸನ್ ವೇತನ ಎಷ್ಟು ಗೊತ್ತಾ..?

ಬಹು ನಿರೀಕ್ಷಿತ ಸಿನಿಮಾ ‘2.0’ ರಿಲೀಸ್ ಆಗಿದೆ. ವಿಶ್ವದಾದ್ಯಂತ ಈಗಾಗಲೇ 500 ಕೋಟಿ ದಾಖಲೆಯ ಗಡಿ ದಾಟಿದೆ. ಇದೀಗ ಈ ಚಿತ್ರ ದಾಖಲೆಯ 1, 000 ಕೋಟಿ ಗಳಿಕೆ ಮಾಡುವ ಹಾದಿಯಲ್ಲಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ದಕ್ಷಿಣ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಈ ಚಿತ್ರ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಗಲಿದೆ.

ಅಂದಹಾಗೇ ಈ ಚಿತ್ರದಲ್ಲಿ ದುಡಿದವರಿಗೆ ಅದೆಷ್ಟು ಸಂಭಾವನೆ ಸಿಕ್ಕಿರಬಹುದು ಎಂಬುದು ಹೆಚ್ಚಿನವರ ಕುತೂಹಲ. ಅದರಲ್ಲಿ 4 ಹೆಸರುಗಳು ನಮ್ಮ ಮುಂದೆ ಬರುತ್ತವೆ. ಈ ಚಿತ್ರದ ನಟನೆಗಾಗಿ ನಟಿ ಆಮಿ ಜಾಕ್ಸನ್ ಗೆ 4 ಕೋಟಿ ರೂಪಾಯಿ ವೇತನ ನೀಡಲಾಗಿದೆ.

ಚಿತ್ರ ನಿರ್ಮಾಪಕ ಎಸ್.ಶಂಕರ್ ಗೆ ಈ ಚಿತ್ರವನ್ನು ನಿರ್ದೇಶಿಸಿದ್ದಕ್ಕೆ 10 ಕೋಟಿ ರೂಪಾಯಿ ನೀಡಲಾಗಿದೆ. ಇನ್ನು ಅಕ್ಕಿ ಮತ್ತು ರಜನಿ ಇವರಿಬ್ಬರಲ್ಲಿ ಯಾರಿಗೆ ಹೆಚ್ಚು ವೇತನ ನೀಡಲಾಗಿದೆ ಎಂಬುದು ಮತ್ತೊಂದು ಕುತೂಹಲ. ಒಂದು ಮೂಲಗಳ ಪ್ರಕಾರ ನಟ ಅಕ್ಷಯ್ ಕುಮಾರ್ ರಿಗೆ 40 ಕೋಟಿ ಹಾಗೂ ರಜನಿಕಾಂತ್ ರಿಗೆ 60 ಕೋಟಿ ರೂಪಾಯಿ ನೀಡಲಾಗಿದೆ. ಅಕ್ಕಿಗಿಂತ ರಜಿನಿ ಸರ್ ಹೆಚ್ಚು ಶುಲ್ಕವನ್ನು ಪಡೆದುಕೊಂಡಿದ್ದಾರೆ ಎಂಬುದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com