ಪಾಯ್ಸಿನ್ ಪ್ರಸಾದ ಕೇಸ್ : 14 ದಿನ ನ್ಯಾಯಾಂಗ ಬಂಧನ : ಆರೋಪಿಗಳು ಮೈಸೂರು ಜೈಲಿಗೆ ಶಿಫ್ಟ್

ಚಾಮರಾಜ ನಗರ ಜಿಲ್ಲೆ ಸುಳ್ವಾಡಿ ಗ್ರಾಮದ ಮಾರಮ್ಮ ದೇಗುಲದ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಆರೋಪಿಗಳನ್ನ ಚಾಮರಾಜ ನಗರ ಜಿಲ್ಲಾ ಕಾರಾಗೃಹದ  ಬದಲಿಗೆ ಮೈಸೂರು ಜೈಲಿಗೆ ನಿನ್ನೆ ತಡರಾತ್ರಿ ಶಿಫ್ಟ್  ಮಾಡಲಾಗಿದೆ.

ಸುಲ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ  ಹಿಮ್ಮಡಿ ಮಹದೇವಸ್ವಾಮಿ , ಅಂಬಿಕಾ , ಮಾದೇಶ ದೊಡ್ಡಾಯ್ಯ  ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಧ್ಯರಾತ್ರಿ ನ್ಯಾಯಾಧೀಶರ ಮುಂದೆ ಆರೋಪಿಗಳನ್ನ ಹಾಜರುಪಡಿಸಲಾಗಿತ್ತು. ಸದ್ಯ ಆರೋಪಿಗಳನ್ನ 14 ದಿನಗಳ‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ನಾಲ್ವರು ಆರೋಪಿಗಳು ಮೈಸೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಚಾಮರಾಜ ನಗರ ಜಿಲ್ಲಾ ಕಾರಾಗೃಹದಲ್ಲಿ  ಆರೋಪಿಗಳನ್ನ ಬಂದನದಲ್ಲಿಡಬೇಕಿತ್ತು ಆದರೆ ಹೆಚ್ಚಿನ ಭದ್ರತೆಯ ದೃಷ್ಟಿಯಿಂದ ಮೈಸೂರು ಕಾರಾಗೃಹಕ್ಕೆ ನೆನ್ನೆ ಮಧ್ಯರಾತ್ರಿ ರವಾನಿಸಿದ್ದಾರೆ.  ಜನವರಿ 3ರ ವರೆಗೂ ಮೈಸೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com