ಬಿ.ಸಿ. ಪಾಟೀಲ್ ಗೆ ಸಚಿವ ಸ್ಥಾನ ಸಿಗದ ಕಾರಣ ಬೆಂಬಲಿಗ ಆತ್ಮಹತ್ಯೆಗೆ ಯತ್ನ

ಶಾಸಕ ಬಿ.ಸಿ.ಪಾಟೀಲ್ ಗೆ ಸಚಿವ ಸ್ಥಾನ ಕೈತಪ್ಪಿ ಹಿನ್ನೆಲೆಯಲ್ಲಿ ಇವರ ಬೆಂಬಲಿಗೆ ಆತ್ಮಹತ್ಯೆಗೆ ಮುಂದಾಗಿರುವ ಘಟನೆ ನಡೆದಿದೆ. ಪುಟ್ಟೇಶ್ ಗೊರವರ ಎಂಬಾತ ಆತ್ಮಹತ್ಯೆಗೆ ಮುಂದಾದ ಬೆಂಬಲಿಗ. ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿರುವ ಬಿ.ಸಿ. ಪಾಟೀಲ್ ಅವರ ನಿವಾಸದ ಬಳಿ ಇರುವ ನೀರಿನ ಟ್ಯಾಂಕ್ ಹತ್ತಿ ಆತ್ಮಹತ್ಯೆಗೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಕಳೆದೆರೆಡು ಬಾರಿಯೂ ಬಿಸಿ ಪಾಟೀಲ್ ಅವರು ಸಚಿವರಾಗುತ್ತಾರೆ ಎನ್ನುವ ನಂಬಿಕೆ ಇತ್ತು.

ಆದರೆ ಆ ನಂಬಿಕೆ ಸುಳ್ಳಾಗಿದೆ. ಈ ಬಾರಿ ಬಿಸಿ ಪಾಟೀಲ್ ರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ತುಂಬಾ ಜನ ಬೆಂಬಲಿಗರಿಗಿತ್ತು. ಆಸರೆ ನಿರೀಕ್ಷೆಗೆ ತಕ್ಕಂತೆ ಸಚಿವ ಸ್ಥಾನ ಸಿಗದ ಕಾರಣ ಬೆಂಬಲಿಗೆ ನೀರಿನ ಟ್ರಾಂಕ್ ಮೇಲೇರಿ ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಾ ಆತ್ಮಹತ್ಯಗೆ ಯತ್ನಿಸಿದ್ದಾನೆ. ಪೊಲೀಸರು ಈತನನ್ನು ರಕ್ಷಸಿದ್ದು, ಈತ ಕಳೆದ ಬಾರಿ ಬಿಡಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗದೇ ಇದ್ದಾಗಲೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎನ್ನಲಾಗಿದೆ.

 

 

 

 

 

Leave a Reply

Your email address will not be published.

Social Media Auto Publish Powered By : XYZScripts.com